ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ನ್ಯಾಷನಲ್ ಪಬ್ಲಿಕ್ ಶಾಲೆಯಿಂದ ಮ್ಯಾರಥಾನ್

0
166

ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ನ್ಯಾಷನಲ್ ಪಬ್ಲಿಕ್ ಶಾಲೆಯಿಂದ ಮ್ಯಾರಥಾನ್

ಶಿವಮೊಗ್ಗ: ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಇಲ್ಲಿನ ನ್ಯಾಶನಲ್ ಪಬ್ಲಿಕ್ ಶಾಲೆಯಿಂದ ಇದೇ ಜನವರಿ 13ರಂದು ‘ರನ್ ಫಾರ್ ಯೂತ್-ಯೂತ್ ಫಾರ್ ನೇಷನ್-ನೇಷನ್ ಫಾರ್ ಯೂತ್’ ಎಂಬ ಘೋಷಣೆಯೊಂದಿಗೆ ಮ್ಯಾರಥಾನ್ ಓಟ ಏರ್ಪಡಿಸಲಾಗಿದೆ ಎಂದು ನ್ಯಾಷನಲ್ ಪಬ್ಲಿಕ್ ಶಾಲೆಯ    ಪ್ರಾಂಶುಪಾಲೆ ಶ್ರೀಮತಿ ನವೀನ ಎಂ. ಪಾಯ್ಸತಿಳಿಸಿದರು.
ಶಾಲೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದ ಪ್ರತಿಷ್ಠಿತ ರಾಷ್ಟ್ರೀಯ ಶಿಕ್ಷಣ ಸಮಿತಿಯ ಘಟಕವಾದ ನ್ಯಾಷನಲ್ ಪಬ್ಲಿಕ್ ಶಾಲೆ ಮತ್ತು ಡೆಕಾಥ್ಲಾನ್, ಶಿವಮೊಗ್ಗ ಇವರ ಸಹಭಾಗಿತ್ವದಲ್ಲಿ ಈ ಮ್ಯಾರಥಾನ್ ಓಟ ಏರ್ಪಡಿಸಲಾಗಿದ್ದು, ಸುಮಾರು 1000 ವಿದ್ಯಾರ್ಥಿಗಳು ಮತ್ತು ಪೊಷಕರು ಭಾಗವಹಿಸಲಿದ್ದು ನಗರದ ಜನಮನ ಸೆಳೆಯುವುದರೊಂದಿಗೆ ಸ್ವಾಮಿ ವಿವೇಕಾನಂದರ ಸಂದೇಶವನ್ನು ಸಾರುವುದರಲ್ಲಿ ಸಾರ್ಥಕತೆಯನ್ನು ಮೆರೆಯಲಿದೆ ಎಂದರು.


ಅಂದು ಬೆಳಗ್ಗೆ 6 ಗಂಟೆಗೆ ಶಾಲಾ ಆವರಣ ದಿಂದ ಪ್ರಾರಂಭವಾಗುವ ಮ್ಯಾರಥಾನ್ ನಗರದ ಸಂಗೊಳ್ಳಿರಾಯಣ್ಣ ವೃತ್ತ, ಶಂಕರಮಠ ರಸ್ತೆ, ಎ.ಎ.ಸರ್ಕಲ್, ಸಿಟಿ ಸೆಂಟರ್ ಮಾಲ್, ಗೋಪಿ ಸರ್ಕಲ್, ಮಹಾವೀರ ವೃತ್ತ (ಕೋರ್ಟ್ ಸರ್ಕಲ್), ಕೆ.ಇ.ಬಿ ಸರ್ಕಲ್‍ನಿಂದ ಪುನಃ ಶಾಲಾ ಆವರಣ ಹೀಗೆ ಸುಮಾರು 5 ಕಿ.ಮೀ ದೂರವನ್ನು ಕ್ರಮಿಸಲಿದೆ ಎಂದ ಅವರು, ವಿದ್ಯಾರ್ಥಿಗಳು ಓಡಿ ದಣಿಯದೆ ನಡೆದು ಬಳಲದೆ ಉತ್ಸುಕರಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಎಸ್.ಎನ್.ನಾಗರಾಜ, ನ್ಯಾಷನಲ್ ಪಬ್ಲಿಕ್, ಶಾಲೆಯ ಪ್ರಾಂಶುಪಾಲೆ ಶ್ರೀಮತಿ ನವೀನ ಎಂ. ಪಾಯ್ಸ್ ಹಾಗೂ ಉಪಪ್ರಾಂಶುಪಾಲ ರಂಗನಾಥ ಮತ್ತು ಡೆಕಾಥ್ಲಾನ್ ವ್ಯವಸ್ಥಾಪಕ ಅಮೃತ್ ಇವರ ನಾಯಕತ್ವದಲ್ಲಿ ಮ್ಯಾರಥಾನ್ ಓಟ ನಡೆಯಲಿದ್ದು, ಈ ಮ್ಯಾರಥಾನ್‍ನಲ್ಲಿ ಸಾರ್ವಜನಿಕರು ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕೆಂದು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಲೆಯ ಸಂಯೋಜಕರಾದ
ಮುಖ್ಯ ಶಿಕ್ಷಕೀ ಶ್ರೀಮತಿ ಬಿ.ಜಿ ಧನಲಕ್ಷ್ಮಿ ಹಾಗೂ ಶಾಲೆಯ ಸಂಯೋಜಕರಾಗಿರುವ ಶ್ರೀಮತಿ ಪದ್ಮಿನಿ , ಶ್ರೀಮತಿ ಜಯಮಾಲಾ , ಶ್ರೀಮತಿ ಸೌಮ್ಯ ಎಂ ಡಿ ,ಶ್ರೀಮತಿ ಜಯಂತಿ, ಶ್ರೀಮತಿ ಅಶ್ವಿನಿ ಅಂಬೆೇಕರ್ ಹಾಗೂ ವಿದ್ಯಾರ್ಥಿಸಂಘದ ವತಿಯಿಂದ ಕುಮಾರಿ ಕೃತಿಕ ಹಾಗೂ ಕುಮಾರ್ ನಿಶ್ಚಯ್ ಎಂ ಶೆಟ್ಟಿ ಉಪಸ್ಥಿತರಿದ್ದರು.