ಕೊನಗವಳ್ಳಿಯಲ್ಲಿ ನೆನ್ನೆ ಗ್ರಾಮ ಸಭೆ

0
17

 

ಶಿವಮೊಗ್ಗ ತಾಲೂಕಿನ ಕೊನಗವಳ್ಳಿಯಲ್ಲಿ ನೆನ್ನೆ ಗ್ರಾಮ ಸಭೆ ಏರ್ಪಡಿಸಿದ್ದು

ಸಭೆಯ ಅಧ್ಯಕ್ಷತೆಯನ್ನು ಯೋಗೀಶ್ ಎಚ್ ಎಂ  ಅವರು ವಹಿಸಿದ್ದು ನೋಡಲ್ ಅಧಿಕಾರಿಯದ ಚಂದ್ರಪ್ಪ
ಯೋಜನಾ ಅಧಿಕಾರಿಗಳು,
ಹಾಗೂ ಅರಣ್ಯ ಅಧಿಕಾರಿಯಾಗಳಾದ

dfo ಪಾಂಡುರಂಗ ರವರು ಮತ್ತು ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರುಗಳು  ಉಪಸ್ಥಿತರಿದ್ದು ಗ್ರಾಮ ಪಂಚಾಯಿತಿಯ ಹಲವು ಹಳ್ಳಿಗಳ ಗ್ರಾಮಸ್ಥರು ತಮ್ಮೂರಿನ ಕೆಲಸದ ಕುಂದು ಕೊರತೆಗಳನ್ನು ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತಂದಿದ್ದು,

ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದು, ದನದ ಕೊಟ್ಟಿಗೆಯ ಹಂಚಿನ ಬದಲು ಶೀಟ್ ಹಾಕುವ ಬಗ್ಗೆ ದೀರ್ಘಕಾಲ ಚರ್ಚೆಯಾಗಿದ್ದು ರೈತರು ದನದ ಕೊಟ್ಟಿಗೆ ಶೀಟ್ ಅಳವಡಿಸುವುದರಿಂದ ತಾಪಮಾನ ಹೆಚ್ಚಾಗುವುದಲ್ಲದೆ ವೆಚ್ಚವೂ ದುಬಾರಿಯಾಗುವುದು ಎಂದು ಅಧಿಕಾರಿಗಳ ಗಮನಕ್ಕೆ ತಂದರು ಹಾಗೂ ಹೆಚ್ಚು ವಿರೋಧ ವ್ಯಕ್ತಪಡಿಸಿದರು  ತಕ್ಷಣಕ್ಕೆ ಸ್ಪಂದಿಸಿದ ಯೋಜನಾಧಿಕಾರಿ ಚಂದ್ರಪ್ಪನವರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಹಂಚನ್ನು ಹಾಕಲು ಅವಕಾಶ ಮಾಡಿಕೊಡುವುದಾಗಿ ರೈತರನ್ನು ಸಮಾಧಾನ ಪಡಿಸಿದರು,

ನಂತರ ಮಾತನಾಡಿದ ಸೋಶಿಯಲ್ ಫಾರೆಸ್ಟ್ ಅಧಿಕಾರಿಯದ ಪ್ರವೀಣ್ ರವರು ಅರಣ್ಯದಲ್ಲಿ ಈoಗುಗುಂಡಿ ನಿರ್ಮಿಸಲು ಹೋದ ವರ್ಷದಲ್ಲಿ ಹೆಚ್ಚಿನ ದರವನ್ನು ಸರ್ಕಾರ ನಿಗದಿಪಡಿಸಿದ್ದು ಈ ವರ್ಷ ಕಡಿಮೆ ದರವನ್ನು ನಿಗದಿಪಡಿಸಿದೆ ಹಾಗಾಗಿ ರೈತರು ಯಾರು ಬರುತ್ತಿಲ್ಲವೆಂದು ತಮ್ಮ ಅಳಲನ್ನು ತೋಡಿಕೊಂಡರು ಮಧ್ಯ ಪ್ರವೇಶಿಸಿದ ರೈತರು ಇಂಗುಂಡಿ ಬದಲು ಈ ವರ್ಷ ಹಣ್ಣಿನ ಗಿಡಗಳನ್ನು  ಕಾಡಿನಲ್ಲಿ ಬೆಳೆಸಲು ಮುಂದಾಗಬೇಕು ಎಂದು ಮನವಿ ಮಾಡಿದರು ಇದಕ್ಕೆ ಅರಣ್ಯ ಅಧಿಕಾರಿಯದ ಪಾಂಡುರಂಗ ರವರು ನಾವು ಕಾಡಿನಲ್ಲಿ ಈಗಾಗಲೇ ಹಲವು ಹಣ್ಣಿನ ಜಾತಿಯ ಗಿಡಗಳನ್ನು ನೆಟ್ಟು ಘೋಷಣೆ ಮಾಡುತ್ತಿರುವುದಾಗಿ ಸಭೆಯಲ್ಲಿ ತಿಳಿಸಿದರು, 

ಜಲನಯನದ ಅಧಿಕಾರಿಯದ ಧನರಾಜ್ ಅವರು ರೈತರ ಹೊಲದಲ್ಲಿ ಸಸಿಗಳನ್ನು ನೆಡಲು nrig ಸಹಾಯಧನ ನೀಡುವುದಾಗಿ ಸಭೆಯಲ್ಲಿ ತಿಳಿಸಿದ್ದು, ಅಧ್ಯಕ್ಷರಾದ ಯೋಗೀಶ್ ಎಚ್ ಎಂ ಅವರು ಗರಂ ಆಗಿದ್ದು ಅಲ್ಲರೀ ನಿಮ್ಮ ಇಲಾಖೆ ಯಾವುದಕ್ಕೆ ಸಂಬಂಧಪಟ್ಟಿದ್ದು ಎಂದು ಪ್ರಶ್ನಿಸಿದಾಗ ತಬ್ಬಿಬ್ಬಾದ ಧನರಾಜ್ ಸಭೆಯಲ್ಲಿ ಸುಮ್ಮನೆ ನಿಂತಿರುವುದು ಕಂಡ ಅಧ್ಯಕ್ಷರು ಜಲ ನಯನದ ಮೂಲ ಉದ್ದೇಶವನ್ನು ಅಧಿಕಾರಿಗೆ ತಿಳಿಸಿದರು  ಜಲನಯನದ ಅಧಿಕಾರಿ  ತಮ್ಮ ಇಲಾಖೆಗೆ ಸಂಬಂಧಪಟ್ಟ ಯಾವುದೇ ಮಾಹಿತಿಯನ್ನು ತಿಳಿದುಕೊಳ್ಳದೆ ಸಭೆಗೆ ಬಂದಿರುವುದರಿಂದ ಗ್ರಾಮಸ್ಥರು ಹಾಗೂ ಅಧಿಕಾರಿಗಳು   ಧನರಾಜ್ ಮುಖಕ್ಕೆ  ಉಗಿದು ಗಿಡ ನೆಡುವ ಕೆಲಸವನ್ನು ಈಗಾಗಲೇ ಫಾರೆಸ್ಟ್ ಇಲಾಖೆ ಅಧಿಕಾರಿಗಳು ಮಾಡುತ್ತಿದ್ದು ನಿಮ್ಮ ಇಲಾಖೆಯ ಮೂಲ ಉದ್ದೇಶವನ್ನು ಏನೆಂಬುದು ಮೊದಲು ತಿಳಿದುಕೊಳ್ಳಿ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರು ಜಾಡಿಸಿದರು ಸುಮ್ಮನೆ ನಿಂತ ಧನರಾಜ್ ರವರಿಗೆ   ಗ್ರಾಮಸ್ಥರು ಹೇಳುವ ಅವಾಲುಗಳನ್ನು ನೋಟ್ ಮಾಡಿಕೊಳ್ಳಲು ಡೈರಿಯಾದರೂ  ತಂದಿದಿಯೇನಪ್ಪಾ ಎಂದು ನೋಡಲ್ ಅಧಿಕಾರಿ ವಿಚಾರಿಸಿದರೆ ಡೈರಿ ನನ್ನ  ವೆಹಿಕಲ್ನಲ್ಲಿ ಬಿಟ್ಟು ಬಂದಿದ್ದೇನೆ ಎಂದು ಉತ್ತರ ನೀಡಿದ್ದು ಗ್ರಾಮಸ್ಥರ ಕಿಂಗಣ್ಣಿಗೆ ಗುರಿಯಾದರು ನೊಡೆಲ್ ಅಧಿಕಾರಿಯಾದ ಚಂದ್ರಪ್ಪನವರು ಮುಂದಿನ ಸಭೆಗೆ ಬರುವಾಗ ಇಲಾಕವರು ಮಾಹಿತಿಯನ್ನು ತಿಳಿದುಕೊಂಡು ಬರಬೇಕೆಂದು ತಿಳಿಸಿದರು,
ನಂತರ ತೋಟಗಾರಿಕೆ ಇಲಾಖೆಯ ರಾಜೇಗೌಡರ ಪರವಾಗಿ ಸುರೇಖಾ ರವರು ತೋಟಗಾರಿಕೆ ಇಲಾಖೆಯಿಂದ ಅಡಿಕೆಗೆ ಸಿಂಪಡಿಸುವ ಸಪಾ ಔಷಧಿಯು ಉಚಿತವಾಗಿ ನೀಡುತ್ತಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಿದರು, ಹಾಗೂ ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸಿಗುವ ಸೌಲಭ್ಯಗಳನ್ನು ಸಂಶುಕ್ತವಾಗಿ ತಿಳಿಸಿದರು,
ವಿಪರ್ಯಾಸವೆಂದರೆ ಸಭೆಯಲ್ಲಿ ಹಿಂದಿನ ಸೀಟಿನಲ್ಲಿ ಅಸೀನರಾಗಿರುವ ಮಹಿಳೆಯರಿಗೆ ಮೈಕ್ ಇಲ್ಲದಿರುವುದರಿಂದ ಎನು ಕೇಳಿಸುತ್ತಿಲ್ಲ ಎಂದು ಹೇಳಿದಾಗ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಯೋಗೀಶ್ ಅವರು ಮುಂದಿನ ಸಭೆಗೆ ಸೌಂಡ್ ಸಿಸ್ಟಮ್ ಅನ್ನು ಖರೀದಿಸುವುದಾಗಿ ಭರವಸೆ ನೀಡಿ ಹಲವು ಕಾಮಗಾರಿಗಳಿಗೆ ಅನುಮೋದನೆ ನೀಡಿ ಸಭೆಗೆ ವಿರಾಮ ಘೋಷಣೆ ಮಾಡಿದರು.