ಈಗಿನ ಯುವ ಪೀಳಿಗೆಯ ಯುವಕ, ಯುವತಿಯರಲ್ಲಿ ದೇಶಾಭಿಮಾನ, ರಾಷ್ಟ್ರ ಆಭಿಮಾನ ಅರುವಿನ ಕೊರತೆ ಕಾಣುತ್ತಿದೆ!?

0
81

ಯುವಕರಲ್ಲಿ ದೇಶಾಭಿಮಾನದ ಬಗ್ಗೆ ಜಾಗೃತಿ ಮೂಡಿಸಲು ಕರ್ನಲ್ ರವರಿಗೆ ಎಸ್.ಸಿ.ಐ ಮನವಿ, 

ನಗರದ, 20 ಕರ್ನಾಟಕ ಬೆಟಾಲಿಯನ್ ಕೇಂದ್ರ ಕಚೇರಿಗೆ,

ಸೀನಿಯರ್ ಛೇಂಬರ್ ಇಂಟರ್ನ್ಯಾಷನಲ್ (SCI) ಶಿವಮೊಗ್ಗ ಭರವಸೆಯ ಸಮಿತಿಯ ಪದಾಧಿಕಾರಿಗಳು ಕರ್ನಲ್ ಮಾನ್ಯ ಶ್ರೀ ಅರುಣ್ ಯಾದವ್ ಅವರನ್ನು ಭೇಟಿ ಮಾಡಿ,

ಈಗಿನ ಪೀಳಿಗೆಯ ಯುವಕ, ಯುವತಿಯರಲ್ಲಿ ದೇಶಾಭಿಮಾನ, ರಾಷ್ಟ್ರ ಆಭಿಮಾನ ಅರುವಿನ ಕೊರತೆ ಕಾಣುತ್ತಿದೆ,

ಎಂಬ ವಿಷಯವನ್ನು  ವಿಶ್ಲೇಷಿಸಿ ಈ ಮೊದಲು ನಮ್ಮ ದೇಶದಲ್ಲಿ ಕಾಲೇಜಿನ ಯುವಕ, ಯುವತಿಯರು ರಾಷ್ಟ್ರೀಯ ಹಬ್ಬಗಳಲ್ಲಿ ಪಥಸಂಚನದಲ್ಲಿ ಹೆಚ್ಚು ಹೆಚ್ಚು ಭಾಗವಹಿಸುವಿಕೆ ಕಾಣುತ್ತಿದ್ದೇವು,

ಇಂದಿನ ದಿನಗಳಲ್ಲಿ ಅವರುಗಳ ಸಂಖ್ಯೆ ರಾಷ್ಟ್ರೀಯ ಹಬ್ಬಗಳ ಪಥಸಂಚನದಲ್ಲಿ ಕಡಿಮೆ ಸಂಖ್ಯೆಗಳನ್ನು ಕಾಣುತ್ತಿದ್ದೇವೆ ಇದು ವಿಪರ್ಯಾಸ ಅದರಿಂದ
ದೇಶ ರಕ್ಷಣೆಯ ಆರ್ಮಿಯ ಬಗ್ಗೆ ಹಾಗೂ ರಾಷ್ಟ್ರೀಯ ಹಬ್ಬಗಳ ಪಥಸಂಚಲದಲ್ಲಿ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವಂತೆ ಜಾಗೃತಿ ಮೂಡಿಸಿ,

ಅವರುಗಳಲ್ಲಿ ದೇಶಾಭಿಮಾನ,
ರಾಷ್ಟ್ರಾಭಿಮಾನ, ಅರುವಿನ ಜಾಗೃತಿಗಳನ್ನು ಮೂಡಿಸುವ ಕಾರ್ಯಗಳಾಗಲಿ,

ವಿದ್ಯಾರ್ಥಿಗಳಲ್ಲಿ ನಮ್ಮ ದೇಶ   ಹಾಗೂ ನಮ್ಮ ಸೈನ್ಯದ ಜಾಗೃತಿ ವಿದ್ಯಾರ್ಥಿ ದಶಯಲ್ಲೇ ಮೂಡಿಸಲು ಬೆಟಾಲಿಯನ್ನಲ್ಲಿರುವ ಸೈನ್ಯದ ವಿವಿಧ ರೀತಿಯ ಬಂದೂಕು ಹಾಗೂ ಇನ್ನಿತರೆ ಶಸ್ತ್ರಾಸ್ತ್ರಗಳನ್ನು ವೀಕ್ಷಿಸಲು ಶಾಲಾ ವಿಧ್ಯಾರ್ಥಿಗಳಿಗೆ ಅವಕಾಶ ನೀಡಲು ಕೋರಲಾಯಿತು.

ಈ ಸಂದರ್ಭದಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಶಿವಮೊಗ್ಗ ಭರವಸೆಯ ಅಧ್ಯಕ್ಷರು ರಮೇಶ್ ಬಾಬು,
  ಅಣಜಿ ಬಸವರಾಜ್, ಕಾರ್ಯದರ್ಶಿಗಳು
ಸದಸ್ಯರುಗಳಾದ ಶಶಿಧರ್,ಚನ್ನವೀರಪ್ಪ ಗಾಮನಗಟ್ಟಿ, ಜೋಯಿಸ್, ಧರಣೇಂದ್ರ ದಿನಕರ್, ಮೋಹನ್, ಡಾ.ಸ್ವಾತಿಕ್ ಆನಂದ್ ರಾವ್ ಜಾದವ್, ಹಾಗೂ ಇತರರೂ ಉಪಸ್ಥಿತರಿದ್ದರು.