0
122

ಮಲೆನಾಡು ವೀರಶೈವ ಲಿಂಗಾಯತರ ಮಠಾಧೀಶರ ಪರಿಷತ್ತು ವತಿಯಿಂದ ಸಂಸದ ಬಿ.ವೈ.ರಾಘವೇಂದ್ರರಿಗೆ ಇದೇ ತಿಂಗಳ ಡಿಸೆಂಬರ್ 8 ಶುಕ್ರವಾರ ಸಂಜೆ5:30ಕ್ಕೆ ಸರ್ಜಿ ಕನ್ವೆನ್ಷನ್ ಹಾಲ್ ನಲ್ಲಿಅಭಿನಂದನಾಸಮಾರಂಭ ಹಮ್ಮಿಕೊಳ್ಳಲಾಗಿದೆ.

ಇಂದಿನ ಪತ್ರಿಕಾಗೋಷ್ಠಿಯಲ್ಲಿ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡುತ್ತಾ,

ಶಿವಮೊಗ್ಗ ಜಿಲ್ಲೆಯ30 ಮಠಗಳು ಒಂದುಗೂಡಿ ಪರಿಷತ್ತನ್ನ ರಚಿಸಿಕೊಂಡಿದ್ದು, ಅಂದಿನ ಸಿಎಂ ಧರ್ಮಸಿಂಗ್ ನೇತೃತ್ವದ ಸರ್ಕಾರ ಪರಿಷತ್ತು ರಚನೆಗೆ ಅಸ್ತು ಎಂದಿತ್ತು. ಬಿಎಸ್ ಯಡಿಯೂರಪ್ಪನವರು ಉದ್ಘಾಟಿಸಿದ್ದರು ಲಿಂಗಾಯತ ಸಮುದಾಯದ ಅಭಿವೃದ್ಧಿಗೆ ಪರಿಷತ್ತು ಇದುವರೆಗೂ ಶ್ರಮಿಸಿದೆ. ಡಿ.08 ರಂದು ಸಂಜೆ 5-30 ಕ್ಕೆ ನವುಲೆಯಲ್ಲಿರುವ ಕನ್ವೆನ್ಷನಲ್ ಹಾಲ್ ನಲ್ಲಿ ನಡೆಯುವ ಕಾರ್ಯಕ್ರಮವನ್ನ ಸಾರ್ಥಕ  ಸುವರ್ಣ ಎಂಬ ಹೆಸರಿನಡಿ ನಡೆಯಲಿದೆ.

ನಮ್ಮ ಪರಿಷತ್ನಿಂದ ಕೋವಿಡ್, ಅತಿವೃಷ್ಠಿ, ಅನಾವೃಷ್ಠಿಯ ವೇಳೆ ಮಠ ಸಮಾಜದ ಪರವಾಗಿ ನಿಂತಿದೆ.
ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ಅತಿ ಕಿರಿಯ ವಯಸ್ಸಿನಲ್ಲಿಯೇ ಸಂಸದ ರಾಘವೇಂದ್ರ ಮಾಡಿರುವ ಕೆಲಸ ಇಡೀ ದೇಶ ಗುರುತಿಸುವಂತೆ ಮಾಡಿದ್ದಾರೆ ಅದರಲ್ಲೂ ಮುಖ್ಯವಾಗಿ ಉಡುತಡಿ ಅಕ್ಕನ ಕ್ಷೇತ್ರ ತುಂಬಾ ಅಭಿವೃದ್ಧಿಪಡಿಸಿದ್ದಾರೆ, ಅದರಂತೆ ಸಿಗಂದೂರು ಸೇತುವೆ ನಿರ್ಮಾಣ ಬರದಿಂದ ಸಾಗುತ್ತಿದೆ,
ವಿದೇಶದಿಂದ ಬರುತ್ತಿರುವ ಜನ ಶಿವಮೊಗ್ಗವನ್ನು ನೋಡಿ ಆಶ್ಚರ್ಯ ಪಡುವಂತಾ ಅಭಿವೃದ್ಧಿಯಾಗಿದೆ ಎಂದು ಭಕ್ತರು ನಮ್ಮಲ್ಲಿ ಹೇಳುತ್ತಾರೆ ಇತ್ತೀಚೆಗೆ ಸರ್ಕಾರಗಳು ಮಾಡುವ ಕೆಲಸವು ಮಠಗಳು ಮಾಡುತ್ತಿವೆ ಇದನ್ನು ಕಂಡ ಸರ್ಕಾರಗಳು ಮಠಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನಗಳನ್ನು ನೀಡಿವೆ,

ಕಿರಿಯ ವಯಸ್ಸಿನ ಸಂಸದರಿಗೆ ಅಭಿನಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಂದು ನಡೆಯುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ಮ ತಾವೇ ವಹಿಸಿಕೊಳ್ಳುತ್ತಿರುವುದಾಗಿ ತಿಳಿಸಿದ ಶ್ರೀಗಳು,
ಹುಂಚದ ಹೊಂಬುಜ ಜೈನಮಠದ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ಬಾಮಿಗಳು,
ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮಿಗಳು,
ನಿಟ್ಟೂರಿನ ನಾರಾಯಣಗುರು ಸಂಸ್ಥಾನದ ರೇಣುಕಾನಂದ ಮಹಾಸ್ವಾಮಿಗಳು ಭಾಗಿಯಾಗಲಿದ್ದಾರೆ.

 

ಈ ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ಶಿಬಿರ, ಅಲೋಪತಿ ಆಯುರ್ವೇದ ಶಿಬಿರ ಹಾಗೂ ಜಿಲ್ಲೆಯ ಗಣ್ಯರಾದ ಕಾಗೋಡು ತಿಮ್ಮಪ್ಪ,
ಚಲನಚಿತ್ರ ನಟ ದೊಡ್ಡಣ್ಣ ವಿಶೇಷವಾಗಿ ಕೆಳದಿ ರಾಣಿ ಚೆನ್ನಮ್ಮ ಪ್ರಶಸ್ತಿಯನ್ನು ಮಂಜಮ್ಮ ಜೋಗತಿ ಅವರಿಗೆ ನೀಡಿ ಗೌರವಿಸಲಾಗುವುದು.

ಇಂದಿನ ಪತ್ರಿಕಾಗೋಷ್ಠಿಯಲ್ಲಿ ಜಡೆ ಶ್ರೀಗಳು , ಬಿಳಕಿ, ಶ್ರೀಗಳು, ಎಸ್.ಎಸ್.ಜ್ಯೋತಿ ಪ್ರಕಾಶ್, ಡಾ.ಧನಂಜಯ್ ಸರ್ಜಿ,
ಬಿಜೆಪಿ ಪ್ರಮುಖ ಪಿ ರುದ್ರೇಶ್, ಮಹೇಶ್ ಮೂರ್ತಿ ಪಾಲಿಕೆ ಸದಸ್ಯ ವಿಶ್ವಾಸ್, ಶಾಂತವೀರಪ್ಪ ವೀರಶೈವ ಸಮಾಜದ ಪ್ರಮುಖರು ಮೊದಲಾದವರು ಭಾಗಿಯಾಗಿದ್ದರು.