ಕೋಟಿ ಕೋಟಿ ಆಸ್ತಿ ಹೊಡೆಯಲು ನಕಲಿ ಸ್ವಾಮಿಗಳ ಸೃಷ್ಟಿ!??

0
253

ಮಠದ ಆಸ್ತಿ ಹೋಡೆಯಲು ಸೃಷ್ಟಿಯಾದ ಆರು ನಕಲಿ ಸ್ವಾಮಿಗಳು
ಶ್ರೀ ರಾಮಲಿಂಗೇಶ್ವರ ಮಠ ಹಾರಾನಳ್ಳಿ

ಮಠಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಸಾವಿರಾರು ಕೋಟಿ ಬೆಲೆಬಾಳುವ ಆಸ್ತಿ ಇದ್ದು ಹಾಗೂ ಬೆಂಗಳೂರು ನಮ್ಮ ಮೆಟ್ರೋ ವಶಪಡಿಸಿಕೊಂಡ ಭೂಮಿಗೆ ಪರಿಹಾರ ಹಣವು ಈಗಾಗಲೇ ಬ್ಯಾಂಕಿನಲ್ಲಿ 102 ಕೋಟಿ ಹಣ ಜಮವಾಗಿದ್ದು ಈ ಹಣವನ್ನು ಲಪಟಾಯಿಸಲು ನಕಲಿ ಸ್ವಾಮಿಗಳು ಸೃಷ್ಟಿಯಾಗಿದ್ದಾರೆ ಎಂಬುದು ಮಠದ ಭಕ್ತರು ಹಾಗೂ ಸ್ವಾಮೀಜಿಯ ಆರೋಪವಾಗಿದ್ದು ಪ್ರಕರಣ ಈಗಾಗಲೇ ಕೋರ್ಟ್ ಮೆಟ್ಟಿಲೇರಿದ್ದರು ಆಸ್ತಿಗೆ ಸಂಬಂಧಪಟ್ಟ ದಾಖಲೆಗಳು ಮಠದ ಆಫೀಸಿನ ಬೀರುವಿನಲ್ಲಿದ್ದು ಸ್ವಾಮೀಜಿಯು ಇರದ ಸಮಯದಲ್ಲಿ
ಕಿಡಿಗೇಡಿಗಳು ಬೀರುವಿನ ಬಾಗಿಲು ಒಡೆದು ಬೆಂಗಳೂರಿನ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ತೆಗೆದುಕೊಂಡಿದ್ದಲ್ಲದೆ 1ಕೆಜಿಬೆಳ್ಳಿ  ಹಾಗೂ 57,000 ನಗದು ಹಣವನ್ನು   ಧೋಚಿಕೊಂಡು ಹೋಗಿದ್ದಾರೆ
ಈ ಸಂಬಂಧ ಪಟ್ಟಂತೆ ಭಕ್ತಾದಿಗಳು ಮತ್ತು ಮಠದ ಪ್ರಮುಖರು ಕುಂಸಿ ಪೊಲೀಸ್ ಠಾಣೆಗೆ ದೂರು ನೀಡಿದರು ದರೋಡೆ ಪ್ರಕರಣ ದಾಖಲಿಸದೆ ಪ್ರಕರಣಕ್ಕೆ ಸಂಬಂಧಪಟ್ಟ ಆರೋಪಿಗಳನ್ನು ಬಂಧಿಸದೆ ಪ್ರಕರಣವನ್ನು ಮುಚ್ಚು  ಹಾಕುವ ಹುನ್ನಾರ  ನಡೆಯುತ್ತಿದೆ ಎಂದು ಮಠದ ಪ್ರಮುಖರು ಹಾಗೂ ಗ್ರಾಮಸ್ಥರುಗಳಾದ ರುದ್ರೇಶ್ ಸಂಬಂಧಪಟ್ಟ ಠಾಣಾ ಅಧಿಕಾರಿಗಳಿಗೆ ಎಚ್ಚರಿಸುತ್ತಾ ಈಗಲಾದರೂ ಪ್ರಕರಣದ ಆರೋಪಿಗಳನ್ನು ಬಂಧಿಸದಿದ್ದರೆ ಶಿವಮೊಗ್ಗ ಜಿಲ್ಲಾ ಎಸ್ ಪಿ ಕಚೇರಿಗೆ ಮುಂದಿನ ದಿನಗಳಲ್ಲಿ ಮುತ್ತಿಗೆ ಹಾಕುವಲಾಗುವುದು ಎಂದರು ಈ

ಪತ್ರಿಕಾಗೋಷ್ಠಿಯಲ್ಲಿ  ದುಗ್ಗೋಜಿ ರಾವ್ ಗ್ರಾಪಂ ಅಧ್ಯಕ್ಷ ರಮೇಶ್, ಗ್ರಾಪಂ ಸದಸ್ಯ ನಾಗರಾಜ್, ಮಾಜಿ ಸದಸ್ಯ ಶಿವಕುಮಾರ್, ಮಹೇಶ್ ಪ್ರದೀಪ್ ಮಠಧ್ ಹಾಗೂ ಇನ್ನಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.