ಶಿವಮೊಗ್ಗ ವಕೀಲರ ದಿಡೀರ್ ಪ್ರತಿಭಟನೆ: ಗೊಪಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ

0
168

 

ಶಿವಮೊಗ್ಗ ವಕೀಲರ ದಿಡೀರ್ ಪ್ರತಿಭಟನೆ:
ಗೊಪಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ

ಶಿವಮೊಗ್ಗ: ಹೌದು ನಗರದ ಗೊಪಿ ವೃತ್ತದಲ್ಲಿಂದು ವಕೀಲರು ಪ್ರತಿಭಟನೆಗೆ ಮುಂದಾಗಿದ್ರು. ಮದ್ಯಾಹ್ನ 12 ಗಂಟೆಯ ಸಮೆಯಕ್ಕೆ ನೂರಾರು ಸಂಖ್ಯೆಯಲ್ಲಿ ಸೇರಿದ ವಕೀಲರು ಮಾನವ ಸರಪಳಿ ನಿರ್ಮಿಸಿ ರಸ್ತೆ ಸಂಚಾರ ತಡೆದು ವಕೀಲರು ವಿರೋದವನ್ನ ವ್ಯಕ್ತ ಪಡಿಸಿದರು. ಈ ಪ್ರತಿಭಟನೆಗೆ ಕಾರಣ ನಿನ್ನೆ ರಾತ್ರಿ ಚಿಕ್ಕಮಗಳೂರಿನಲ್ಲಿ ಪೊಲೀಸರು ಯುವ ವಕೀಲರ ಮೇಲೆ ನೆಡೆಸಿದ ಮಾರಣಾಂತಿಕ ಹಲ್ಲೆ.

ಚಿಕ್ಕಮಗೂರು ವಕೀಲ ಸಂಘದ ಸದಸ್ಯರಾದ ಪ್ರೀತಮ್ ಎನ್ನುವವರು ರಾತ್ರಿ ವೇಳೆಗೆ ಹೆಲ್ಮೇಟ್ ಧರಿಸದೆ ಬೈಕ್ ಚಲಾಯಿಸುತ್ತಿದ್ದು, ಇವರನ್ನ ತಡೆದ ಪೊಲೀಸ್ರು ದಂಡವಿದಿಸುವುದಾಗಿ ಹೇಳಿದ್ರು.
ಇದೇವೇಳೆ ಸ್ಥಳದಲ್ಲಿದ್ದ ಪೊಲೀಸ್ ಪ್ರೀತಮ್ ಬೈಕ್ ಕೀ ತೆಗೆದುಕೊಂಡಿದ್ದಾರೆ, ಇದನ್ನ ಪ್ರೆಶ್ನೆ ಮಾಡಿದ ಪ್ರಿತಮ್ ಕಾನೂನು ರೀತಿಯಲ್ಲಿ ಪೊಲೀಸ್ರು ಬೈಕ್ ಕೀ ತೆಗೆಯುವಂತಿಲ್ಲಾ ಎಂದು ಹೇಳಿದ್ದಾರೆ.

ಇದರಿಂದ ಕೋಪ ಗೊಂಡ ಪೊಲೀಸರು ಪ್ರೀತಮ್ ರನ್ನ ಠಾಣೆಗೆ ಕರೆದುಕೊಂಡು ಹೋಗಿ ಮಾರಣಾಂತಿಕವಾಗಿ ಹಲ್ಲೆನಡೆಸಿದ್ದು, ಅವರ ಕೈ,ಎದೆಯ ಬಾಗ,
ಬೆನ್ನು ಸೇರೆದಂತೆ ತಲೆಗೂ ತೀರ್ವಾಗಿ ಗಾಯಗಳಾಗಿದೆ. ಇಷ್ಟಕ್ಕೆ ಸುಮ್ಮನಾಗದ ಪೊಲಿಸರು ವಕೀಲರಿಗೆ ಶೂ ಕಾಲಿನಿಂದ ಒದ್ದಿದ್ದು ಮಾತ್ರವಲ್ಲದೆ ಅವಾಚ್ಚ ಪದಗಳನ್ನ ಬಳಸಿದ್ದಾರೆ ಎಂದು ವಕೀಲರು ಆರೋಪಿಸಿ ಇಂದು ಶಿವಮೊಗ್ಗ ನಗರದ ಗೋಪಿ ವೃತ್ತದಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆಗೆ ಮುಂದಾದರು.

 

ಈ ಪ್ರತಿಭಟನೆಯ ವೇಳೆಯೂ ಪೊಲೀಸರು ಹಾಗೂ ವಕೀಲರ ನಡುವೆ ಮಾತಿನ ಸಂಘರ್ಶನಡೆದಿದ್ದು. ಅನುಮತಿಪಡೆಯದೆ ವಕೀಲರು ಪ್ರತಿಭಟನೆಯನ್ನ ನಡೆಸುತ್ತಿರುವುದಾಗಿ ಸರ್ಕಲ್ ಇನ್ಸ್ಪೆಕ್ಟರ್ ಸುರೇಶ್ ಅವರು ಆರೋಪ ಮಾಡಿದರು. ಇದಕ್ಕುತ್ತರಿಸಿದ ವಕೀಲರು, ಭಾರತ ಸಂವಿಧಾನವು ಪ್ರತಿಯೊಬ್ಬರಿಗೂ ತಮ್ಮ ವಿರೋಧ ವ್ಯಕ್ತಪಡಿಸುವ ಹಕ್ಕು ನಿಡಿದ್ದು ನಮ್ಮ ಪ್ರತಿಭನೆಗೆ ನಿಮ್ಮ ಅನುಮತಿಪಡೆಯವ ಅಗತ್ಯವಿಲ್ಲಾ ಎಂದು ವಕೀಲರು ಪ್ರತ್ಯುತ್ತರ ನೀಡಿದರು.

ಇಷ್ಟಕ್ಕೆ ವಕೀಲ ಕೊಪ ತಣ್ಣಗಾಗದೆ ತಮ್ಮ ಮನವಿಯನ್ನ ಶಿವಮೊಗ್ಗ ಜಿಲ್ಲಾ ಪೊಲೀಸ್ ರಕ್ಷಣಾದಿಕಾರಿಗಳು ಅಥವ ಜಿಲ್ಲಾ ದಂಡಾದಿಕಾರಿಗಳು ಸ್ಥಳಕ್ಕೆ ಬಂದು ಮನವಿಯನ್ನ ಸ್ವೀಕರಿಸ ಬೇಕು ಅಲ್ಲಿಯ ವರೆಗೂ ಗೋಪಿ ವೃತ್ತದಲ್ಲಿ ವಾಹನ ಸಂಚಾರಕ್ಕೆ ಮುಕ್ತಗೊಳಿಸುವುದಿಲ್ಲಾ ಎಂದು ಆಕ್ರೋಶ ಗೊಂಡ ವಕೀಲರು ಹೇಳಿದರು. ಅಷ್ಟರಲ್ಲೇ ಬೈಕ್ ಸವಾರನೊಬ್ಬ ವಕೀಲರ ಹತ್ತಿರ ವಾಗ್ವಾದಕ್ಕಿಳಿದ ನಂತರ ವಕೀಲರು ಒಬ್ಬ ವಕೀಲನ ಮೇಲೆ ಹಲ್ಲೆಯಾಗೀದೆ ಅದಕ್ಕಾಗಿ ಈ ತುರ್ತು ಹೋರಾಟವನ್ನು ಮಾಡುತ್ತಿದ್ದೇವೆ ಎಂದು ಮನವೊಲಿಸಿದರು ನಂತರ ಹೋರಾಟದ ರೂಪ ಇನ್ನು ಹೆಚ್ಚಾಗಿ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಮನವೊಲಿಸಿದರಿಂದ ವಕೀಲರು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲು ನಿರ್ಧರಿಸಿದರು.