Wednesday, September 25, 2024
spot_img

ಶ್ರೀ ರಾಮನಾಮ ಜಪ ಯಜ್ಞ ಸಮಿತಿ ಶಿವಮೊಗ್ಗ

ಶ್ರೀ ರಾಮನಾಮ ಜಪ ಯಜ್ಞ ಸಮಿತಿ
” ಶ್ರೀ ರಾಮ ಜಯರಾಮ ಜಯ ಜಯ ರಾಮ”
ಶಿವಮೊಗ್ಗಾದ್ಯಂತ ಜಪಮೂಲಕ ಸ್ಮರಿಸುವ ಕಾರ್ಯಕ್ರಮ.

ಕಳೆದ ಐದು ಶತಮಾನಗಳ ಸುದೀರ್ಘ ಹೋರಾಟದ ನಂತರ ಇಂದು ಅಯೋಧ್ಯೆಯ ರಾಮಜನ್ಮಸ್ಥಾನದಲ್ಲಿ ಭವ್ಯ ರಾಮ ಮಂದಿರದ ನಿರ್ಮಾಣವಾಗುತ್ತಿದೆ. ಈ ಸಂದರ್ಭಕ್ಕೆ ನಾವೆಲ್ಲರೂ ಸಾಕ್ಷಿ ಆಗುತ್ತಿರುವುದೇ ನಮ್ಮ ಸೌಭಾಗ್ಯ ತ್ರೇತಾಯುಗದಲ್ಲಿ ಜನಿಸಿದ ಪ್ರಭು ಶ್ರೀರಾಮಚಂದ್ರನನ್ನು ಯುಗ ಯುಗಗಳ ನಂತರವೂ ಸಹ ಭಾರತೀಯ ಸಮಾಜ ಪೂಜ್ಯ ಭಾವನೆಯಿಂದ ಸ್ಮರಣೆ ಮಾಡಿಕೊಳ್ಳುತ್ತಾ ರಾಮನ ಗುಣಗಳು ಮತ್ತು ಆದರ್ಶಗಳು ನಮ್ಮ ಜೀವನದ ಭಾಗವಾಗಬೇಕೆಂದು ಹಂಬಲಿಸುತ್ತಿರುತ್ತೇವೆ. ಇಂತಹ ಮರ್ಯಾದ ಪುರುಷೋತ್ತಮ ಸಕಲ ಸದ್ಗಾಣಗಳ ಸಂಪನ್ನನಾಗಿರುವ ಶ್ರೀರಾಮಚಂದ್ರನ ಜನ್ಮಸ್ಥಾನದಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವಾಗುತ್ತಿರುವ ಈ ಶುಭ ಸಂದರ್ಭದಲ್ಲಿ ನಾವೆಲ್ಲರೂ ಶ್ರೀ ರಾಮನ ಧ್ಯಾನ, ಜಪ, ಭಜನೆ, ಆರಾಧನೆಗಳೊಂದಿಗೆ ಈ ಕಾರ್ಯದಲ್ಲಿ ಭಾಗವಹಿಸಬೇಕಾಗಿದೆ.
ಆನೇಕ ಮಠಾಧೀಶರು, ಸಾಧು ಸಂತರು, ರಾಮ ಮಂದಿರದ ನಿರ್ಮಾಣದ ಈ ಶುಭ ಸಂದರ್ಭದಲ್ಲಿ ಇಡೀ ಭಾರತೀಯ ಸಮಾಜ ರಾಮ ನಾಮ ಸ್ಮರಣೆಮಾಡಬೇಕೆಂದು ಕರೆ ಕೊಟ್ಟಿರುತ್ತಾರೆ. ಈ ಹಿನ್ನಲೆಯಲ್ಲಿ ಶಿವಮೊಗ್ಗ ನಗರದ ಎಲ್ಲ ಸಮಾಜದ ಪ್ರಮುಖರನ್ನೊಳಗೊಂಡಂತೆ ಶ್ರೀರಾಮ ನಾಮ ಜಪ ಯಜ್ಞ ಸಮಿತಿಯನ್ನು ರಚಿಸಲಾಗಿದೆ.

ಈ ಸಮಿತಿಯ ಮೂಲಕ ಸಮಾಜದ ಬಂಧುಗಳಲ್ಲಿ ವಿನಂತಿ ಮಾಡಿಕೊಳ್ಳುವುದೆನೆಂದರೆ ನಾವೆಲ್ಲರೂ ಪ್ರತಿನಿತ್ಯ ಕನಿಷ್ಟ 108 ಬಾರಿಯಾದರೂ “ಶ್ರೀರಾಮ ಜಯರಾಮ ಜಯ ಜಯ ರಾಮ” ಎಂಬ ಶ್ರೇಷ್ಠವಾದ ಮತ್ತು ವಿಶಿಷ್ಟವಾಗಿರುವ ರಾಮ ತಾರಕ ಮಹಾಮಂತ್ರವನ್ನು ಜಪಿಸಬೇಕು. ಹಾಗೂ ನಾವು ವಿತರಣೆ ಮಾಡಿರುವ ಕರಪತ್ರದಲ್ಲಿ ದಿನಾಂಕದ ಮುಂದೆ ಕುಂಟುಂಬದವರು ಮಾಡಿರುವ ಜಪದ ನಮೂದಿಸಬೇಕಾಗಿ ಕೇಳಿ ಕೊಳ್ಳುತ್ತೇವೆ.

ಈ ಜಪವನ್ನು 22ನೇ ತಾರೀಕು ಜನವರಿ 2024 ರಂದು ಅಯೋಧ್ಯೆಯಲ್ಲಿ ನಡೆಯುವ ಶ್ರೀರಾಮನ ಪ್ರತಿಷ್ಠಾಪನಾ ಸಮಾರಂಭದವರೆಗೆ ನಿರಂತರವಾಗಿ ಮಾಡಬೇಕಾಗಿ ವಿನಂತಿ. ಹಾಗೂ ಬರುವ ದಿನಗಳಲ್ಲಿ ಶಿವಮೊಗ್ಗ ನಗರದ ಶಾಲಾ ಕಾಲೇಜುಗಳಲ್ಲಿ ಪ್ರಭು ಶ್ರೀರಾಮಚಂದ್ರನ ಬಗ್ಗೆ ರಸಪ್ರಶ್ನೆ (ಕ್ವಿಜ್ ಕಾರ್ಯಕ್ರಮ), ಭಕ್ತಿಗೀತೆ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಹಾಗೂ ಭಜನಾ ಸ್ಪರ್ಧೆಗಳನ್ನು ನಡೆಸಲು ಯೋಚಿಸಿದ್ದೇವೆ.

ರಾಮರಾಜ್ಯದ ಕಲ್ಪನೆಯನ್ನು ಹೊಂದಿರುವ ಭಾರತೀಯ ಸಂಸ್ಕೃತಿಯಲ್ಲಿ ಶ್ರೀರಾಮನನ್ನು ಜಪದ ಮೂಲಕ ಸ್ಮರಿಸುತ್ತಾ ರಾಮನ ಗುಣಗಳನ್ನು ನಾವು ಅಳವಡಿಸಿಕೊಳ್ಳಬೇಕಾಗಿದೆ. ಈ ಕಾರ್ಯಕ್ಕೆ ಸಮಸ್ತ ಭಾರತೀಯ ಸಮಾಜ ರಾಮನಾಮ ಜಷದಲ್ಲಿ ಭಾಗವಹಿಸಿ ಈ ಭವ್ಯ ಮತ್ತು ಅವಿಸ್ಮರಣೀಯ ಕಾರ್ಯದಲ್ಲಿ ಸೇರಿಕೊಳ್ಳಬೇಕಾಗಿ ವಿನಂತಿಸುತ್ತೇವೆ. ಹಾಗೂ ಎಲ್ಲಾ ದೇವಾಲಯಗಳಲ್ಲೂ ಶ್ರೀರಾಮತಾರಕ ಮಂತ್ರ ಜಪಿಸುವ ಭಜನೆ, ಸಂಕೀರ್ತನೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಬೇಕಾಗಿ ಸಂಸ್ಥೆಯ ಕಾರ್ಯದರ್ಶಿ ನಟರಾಜ್ ಭಗವತ್ ಅವರು ಹಾಗೂ
ಈ ಸಂಸ್ಥೆಯ ಅಧ್ಯಕ್ಷರಾದ ಆರ್ ಕೆ ಸಿದ್ದರಾಮಣ್ಣ, ಉಪಾಧ್ಯಕ್ಷರುಗಳಾದ ಜೆ ವಾಸುದೇವ ರಮೇಶ್ ಬಾಬು ಕಾರ್ಯದರ್ಶಿಗಳಾದ ಸತೀಶ್ ನಾಡಿಗ್ ಚಂದ್ರಶೇಖರ ( ರಾಜು ) ಶಬರಿ ಕಣ್ಣನ, ಆನಂದರಾವ್ ಜಾದವ್, ಶ್ರೀಮತಿ ಶಾರದಾ ಶ್ರೀಮತಿ ಸುನಿತಾ, ಮುಂತಾದವರು ಇದ್ದರು.

Related Articles

Stay Connected

0FansLike
3,912FollowersFollow
0SubscribersSubscribe

Latest Articles