Wednesday, September 25, 2024
spot_img

ಹಾರನಹಳ್ಳಿ ಗ್ರಾಮದ ಶ್ರೀರಾಮಲಿಂಗೇಶ್ವರ ಮಠದ ಮೇಲೆ ದುಷ್ಕರ್ಮಿಗಳ ದಾಳಿ

ಹಾರನಹಳ್ಳಿ ಗ್ರಾಮದ ಶ್ರೀರಾಮಲಿಂಗೇಶ್ವರ ಮಠದ ಮೇಲೆ ದುಷ್ಕರ್ಮಿಗಳ ದಾಳಿ

ದಿನಾಂಕ 25/11/2023 ರಂದು ಮಧ್ಯಾಹ್ನ ಸುಮಾರು 2 ಗಂಟೆ ಸಮಯದಲ್ಲಿ ಹಾರನಹಳ್ಳಿ ಗ್ರಾಮದ ಶ್ರೀರಾಮಲಿಂಗೇಶ್ವರ ಮಠದ ಮಠಾಧಿಪತಿಯವರು ಇಲ್ಲದ ಸಂಧರ್ಭದಲ್ಲಿ ಬೆಂಗಳೂರಿನಿಂದ ಬಂದಂತಹ 1) ಕೆ ಆರ್ ವಿಶ್ವನಾಥ ವಕೀಲರ. 2) ಉಮೇಶ್ ಬೆಂಗಳೂರು, 3) ಇಂಡುವಳ್ಳಿ ದೇವರಾಜ್ ವಕೀಲರು, ಗೋಪಾಳ ಶಿವಮೊಗ್ಗ, 4) ವೀರೇದ್ರಯ್ಯ ಬಿನ್ ಸೋಮಶೇಖರಯ್ಯ ಜಾಮೇನಹಳ್ಳಿ 5) ಶಿವಕುಮಾರ ಬಿನ್ ಬಸಯ್ಯ ವಿರಗೊಂಡನಕೊಪ್ಪ 6) ಹೇಮಣ್ಯ ಬಿನ್ ಗುಡ್ಡಪ್ಪ ಬೇಡರಕೇರಿ ಹಾರನಹಳ್ಳಿ, 7) ಹುಚ್ಚರಾಯಪ್ಪ ಬಿನ್ ದಾಸರಹನುಮಂತಪ್ಪ ಹಾರನಹಳ್ಳಿ, 8) ಸಂಜೀವ ಬಿನ್ ಬಸವರಾಜಪ್ಪ ಕೋಟೆ ಹಾರನಹಳ್ಳಿ ವಿಶ್ವಾನಾಥ ವಕೀಲರು ಇವರ ಜೊತೆಯಲ್ಲಿ ಬಂದಿದಂತಹ ಸುಮಾರು 20 ಜನರ ತಂಡ ಏಕಾ ಏಕಿ ಮಠದ ಒಳಗಡೆ ಪ್ರವೇಶ ಮಾಡಿ ಮಠದಲ್ಲಿದ್ದ ಹಿಂದಿನ ಗುರುಗಳ ಪೋಟೊ ಒಡೆದು ಹಾಕಿ ಒಳಗಡೆ ಇದ್ದಂತಹ 3 ಗಾಡ್ರೆಜ್ ಬೀರುಗಳನ್ನು ಕಬ್ಬಿಣದ ಸಲಾಕೆಯಿಂದ ಒಡೆದು ಅದರ ಒಳಗಿದ್ದಂತಹ ಸುಮಾರು ಅಂದಾಜು 800 ಗ್ರಾಂ ನಷ್ಟು ಬೆಳ್ಳಿಯ ಪುಜಾ ಸಾಮಾಗ್ರಿಗಳನ್ನು ಹಾಗು ಮಠಕ್ಕೆ ಸೇರಿದ ಎಲ್ಲಾ ದಾಖಾಲತಿಗಳನ್ನು ದೊಚಿಕೊಂಡು ಹೋಗಿರುತ್ತಾರೆ. ಅಲ್ಲದೆ ಮಠದ ಆವರಣದಲ್ಲಿ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಬಾಗಿಲು ಮುರಿದು ಒಳಗಡೆ ಇದ್ದ ದೇವರ ಪ್ರತಿಮೆಯನ್ನು ಧ್ವಂಸ ಗೋಳಿಸಿರುತ್ತಾರೆ. ಹಾಗೂ ಪಕ್ಕದಲ್ಲಿಯೇ ಇದ್ದ ಹಿಂದಿನ ಗುರುಗಳ ಲಿಂಗೈಕ್ಯರಾದ ಸಮಾಧಿಯನ್ನು ಚಿಮಟಿಗೆಯಿಂದ ಹೊಡೆದು ನುಚ್ಚು ನೂರಾಗಿಸಿ ಧ್ವಂಸ ಗೊಳಿಸಿರುತ್ತಾರೆ.

 

 

ಅಷ್ಟರಲ್ಲಿ ದುರುಗೋಜಪ್ಪನವರು ಗ್ರಾಮಸ್ಥರಿಗೆ ತಿಳಿಸಿದ ಕೂಡಲೆ ಗ್ರಾಮ ಹಲವರು ಮುಖಂಡರು ಹೋದಂತ ಸಂದರ್ಭದಲ್ಲಿ ಮಾತಿನ ಚಕಮಕಿ ಮಾಡುತ್ತಿದ್ದು ನಂತರದಲ್ಲಿ ಪರಾರಿ ಯಾಗಿರುತ್ತಾರೆ.
ಸಮಬಂಧ ಪಟ್ಟ ವಿಚಾರದಲ್ಲಿ ಕೇ ಆರ್ ವಿಶ್ವನಾಥ, ಶಿವಕುಮಾರ್ ಇವರ ತಂಡದ ಮೇಲ್ಕಂಡ 20 ಜನರು ಹಾರನಹಳ್ಳಿ ಗ್ರಾಮದಲ್ಲಿ ಭಯೋತ್ಪಾದನೆ ಮಾಡುವ ರೀತಿಯಲ್ಲಿ, ಲಾಂಗು ಮಚ್ಚು ಹಿಡಿದು ಗ್ರಾಮಸ್ಥರನ್ನು ಹೆದರಿಸಿ, ಬೆದರಿಸಿ ಮಾರಾಣಂತಿಕ ಹಲ್ಲೆ ಮಾಡಿ ವಂಚನೆ ಎಸಗಿದ್ದು ಎಲ್ಲಾ ಬೆಳ್ಳಿ ಸಾಮಾಗ್ರಿ ಮತ್ತು ಹಣ ಲೂಟಿ ಮಾಡಿ ದೇವಸ್ಥಾನ ಹಾಗೂ ಗದ್ದಿಗೆ ದ್ವಂಸ ಮಾಡಿದ್ದಾರೆ ಆದ್ದರಿಂದ ಸಂಬಂಧಪಟ್ಟವರನ್ನು ಬಂಧಿಸಿ
ಸೂಕ್ತ ಕಾನೂನು ಜರಗಿಸಬೇಕೆಂದು ಅಪಾರ ಜಿಲ್ಲಾ ಅಧಿಕಾರಿ ಸಿದ್ದನಗೌಡ ರೆಡ್ಡಿ ಅವರಿಗೆ ಮನವಿ ಸಲ್ಲಿಸುವ
ಸಂದರ್ಭದಲ್ಲಿ ಹಾರ್‍ನಹಳ್ಳಿ ಮಠದ ಶಿವಯೋಗಿ ಸ್ವಾಮಿಗಳು, ಜಂಗಮ ಸಮಾಜದ ಪ್ರಮುಖರಾದ ಚಂದ್ರಯ್ಯ, ಪ್ರದೀಪ್ ಮಠದ ಲೋಕೇಶ್ ದೊಡ್ಡಮಠ, ಮುದುವಾಲ ಜಗದೀಶ್, ಟಿ.ಡಿ. ಸೋಮಶೇಖರ್, ಹೆಚ್.ವಿ. ದುರ್ಗೋಜಿರಾವ್ ಜಯರಾಮ್ ಶೆಟ್ಟಿ, ಚಂದ್ರಶೇಖರಯ್ಯ, ಮಲ್ಲಿಕಾರ್ಜುನಯ್ಯ, ಸುರೇಶ್, ಪ್ರಭು, ರಾಮಚಂದ್ರ ಇನ್ನು ಮುಂತಾದವರು ಇದ್ದರು.

Related Articles

Stay Connected

0FansLike
3,912FollowersFollow
0SubscribersSubscribe

Latest Articles