Wednesday, September 25, 2024
spot_img

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮಲೆನಾಡು ಕೇಸರಿ ಪಡೆ ವತಿಯಿಂದ ಮನವಿ

ಮಲೆನಾಡು ಕೇಸರಿ ಪಡೆಯ ಸಂಘದ ಅಧ್ಯಕ್ಷರಾದ ಚಂದ್ರಶೇಖರ (ಕೋಟೆರಾಜು) ಹಾಗೂ ಸದಸ್ಯರುಗಳು
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು,
ಅರಣ್ಯ ಇಲಾಖೆ, ಶಿವಮೊಗ್ಗ ಜಿಲ್ಲೆ.
ಇವರಿಗೆ ಮನವಿ ನೀಡುತ್ತಾ,


ದಸರಾ ಮೆರವಣಿಗೆ ತಂದ ಹೆಣ್ಣು ಆನೆ ನೇತ್ರಾವತಿ, ಮರಿಗೆ ಜನ್ಮ ನೀಡಿದ್ದು, ಇದರ ಗರ್ಭಧಾರಣೆಯ ಬಗ್ಗೆ ನಿರ್ಲ್ಯಕ್ಷ ವಹಿಸಿದ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಕೋರಿ ದೂರು.

23-10-2023ರಂದು ರಾತ್ರಿ ದಸರಾ ಹಬ್ಬದ ಸಾರ್ವಜನಿಕ ಮೆರವಣಿಗೆಗೆಂದು ತಂದಿದ್ದ ಒಂದು ಗಂಡು , ಎರಡು ಹೆಣ್ಣು ಆನೆಯನ್ನು ಅರಣ್ಯ ಇಲಾಖೆಯಿಂದ ತರಿಸಿದ್ದು, ಇದರಲ್ಲಿ ನೇತ್ರಾವತಿ ಎಂಬ ಹೆಣ್ಣು ಆನೆ ಎಲ್ಲರಿಗೂ ಆಶ್ಚರ್ಯ ಮೂಡಿಸುವಂತೆ ಮರಿ ಆನೆಗೆ ಜನ್ಮ ನೀಡಿರುತ್ತದೆ.

ಗರ್ಭಧಾರಣೆ ಮಾಡಿದ ಆನೆಯನ್ನು ಸಾರ್ವಜನಿಕ ಮೆರವಣಿಗೆ ಹಾಗೂ ಒಂದು ಕಡೆಯಿಂದ ಮತ್ತೊಂದು ಕಡೆಗೆ ರವಾನಿಸುವುದು ವಜ್ಯ ಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಬರುವುದಿಲ್ಲ. ಆದ್ದರಿಂದ ಇದಕ್ಕೆ ಅನುಮತಿ ಕೊಟ್ಟ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು .

1. ಗರ್ಭಧರಿಸಿದ ಆನೆಯಲ್ಲಿ ದೈಹಿಕ ಬದಲಾವಣೆಯನ್ನು ಗುರುತಿಸಬೇಕಾಗಿರುವುದು ಸದರಿ ಕೆಲಸ ನಿರ್ವಹಸುತ್ತಿರುವ ಪಶುವೈದ್ಯಾಧಿಕಾರಿ ಕರ್ತವ್ಯ . ಈ ಪ್ರಕರಣದಲ್ಲಿ ಇವರ ದಿವ್ಯನಿರ್ಲಕ್ಷಎದ್ದುತೋರುತ್ತಿದೆ.

2. ಆನೆಗಳಲ್ಲಿ ಗರ್ಭಾವಸ್ಥೆಯ ಅವಧಿ 20-23 ತಿಂಗಳುಗಳದ್ದು, ಈ ಒಂದು ಹೆಣ್ಣು ಆನೆ ಗರ್ಭಧಾರಣೆ ಮಾಡಿರುವ ಬಗ್ಗೆ ಕೆಲವು ಲಕ್ಷಣಗಳ ಮೇಲೆ ಮಾವುತ, ಜಮೇದಾರ್, ಆರ್.ಎಫ್.ಓ. ಪಶು ವೈದ್ಯಾಧಿಕಾರಿ ಗುರುತು ಪತ್ತೆ ಮಾಡಬಹುದು

3. ಆ ಹೆಣ್ಣು ಆನೆ ಗರ್ಭಧಾರಣೆ ಮಾಡಿರುವ ಕೆಲವು Esterous Cycle ಗೆ, ಬರದಿದ್ದರೆ ಅದನ್ನು ಗಮನಿಸಿರುವುದಿಲ್ಲ.
ಗರ್ಭಧರಿಸಿ ಒಂದು ವರ್ಷದ ನಂತರ ಆ ಹೆಣ್ಣು ಆನೆಯ ದೈಹಿಕ ಬದಲಾವಣೆಗಳಾದ, ಕೆಚ್ಚಲು, ಹೊಟ್ಟೆ ಉಬ್ಬುವಿಕೆ ಹಾಗೂ ಮರಿ ಆನೆ ಹೊರಬರುವ ಒಂದು ತಿಂಗಳ ಮುಂಚೆ ಕೆಚ್ಚಲು ಹಿಂಡಿದರೆ ಸ್ಪಷ್ಟವಾಗಿ ದ್ರವ ಬರುವುದನ್ನು ವೈಜ್ಞಾನಿಕವಾಗಿ ಗಮನಿಸುವುದರಲ್ಲಿ ಹಾಗೂ ದಾಖಲಿಸುವುದರಲ್ಲಿ ಈ ಮೇಲ್ಕಂಡ ಸಿಬ್ಬಂದಿಗಳು ವಿಫಲರಾಗಿರುತ್ತಾರೆ ಎಂಬ ಅನುಮಾನ ಮೂಡುತ್ತಿದೆ.

4. ಗರ್ಭಧರಿಸಿದ ಹೆಣ್ಣು ಆನೆ ನಿಧಾನವಾಗಿ ಆಲಸ್ಯದಿಂದ ಕೂಡಿರುತ್ತದೆ. ತಡವರಿಸುತ್ತಾ ನಡೆಯುತ್ತಿರುತ್ತದೆ. ಇದನ್ನು ಸೂಕ್ಷ್ಮವಾಗಿ ಗಮನಿಸದೇ ಇರುವುದು ಸಂಬಂಧಪಟ್ಟ ವೈದ್ಯಾಧಿಕಾರಿಗಳ ಕರ್ತವ್ಯ ಲೋಪ ಹಾಗೂ ಕಾರ್ಯ ತತ್ಪರತೆ ಬಗ್ಗೆ ಪ್ರಶ್ನೆ ಮೂಡುತ್ತದೆ.

5. ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುವಾಗ ಹಾಗೂ ಸಾರ್ವಜನಿಕ ಮೆರವಣಿಗೆ ಕಳುಹಿಸುವ ಮೊದಲು ಎಲ್ಲಾ ಹೆಣ್ಣು ಆನೆಗಳಗೆ ಗರ್ಭಧಾರಣಾ ಪರೀಕ್ಷೆ ನಡೆಸಿ, ಹಾಗೂ ಇತರೆ ದೈಹಿಕ ಪರೀಕ್ಷೆ ನಡೆಸಿ ಅದರ ಸದೃಢತೆಯ ಮೇರೆಗೆ ಫಿಟ್‌ನೆಸ್‌ ಸರ್ಟಿಫಿಕೇಟ್ ದಾಖಲು ಪಡಿಸಿ, ಸದರಿ ಮೇಲಾಧಿಕಾರಿಗಳ ಜೊತೆ ಚರ್ಚಿಸಿ ನಿಯಮಾನುಸಾರವಾಗಿ ನಿರ್ಧಾರಗಳನ್ನು ಈ ನಮ್ಮ ಶಿವಮೊಗ್ಗದ ಪ್ರಕರಣದಲ್ಲಿ ತೆಗೆದುಕೊಳ್ಳುವಲ್ಲಿ ನಿರ್ಲಕ್ಷ್ಯವಹಿಸಿದ್ದರ ಬಗ್ಗೆ ಅನುಮಾನ ಮೂಡುತ್ತದೆ.

6. ಸದರಿ ಆನೆಗಳನ್ನು ನೋಡಿಕೊಳ್ಳುತ್ತಿರುವ ಪಶುವೈದ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿರುವವರು ಪ್ರತಿ ಆನೆಯ ಬಗ್ಗೆ Health Register ನಿರ್ವಹಣೆ ಮಾಡಬೇಕಾಗಿದ್ದು, ಮುಂದೆ ಇದನ್ನು ಆರ್.ಎಫ್.ಓ ಹಾಗೂ ಡಿ.ಎಫ್. ಓ ಗಳ ಗಮನಕ್ಕೆ ಪ್ರತಿ 15 ದಿನಗಳಿಗೊಮ್ಮೆ ಹೆಜ್ಜೆ ರಿಪೋರ್ಟ್ ತರಬೇಕಿದ್ದು, ಮೇಲ್ಕಂಡ ಪ್ರಕರಣ ನೋಡಿದರೆ ಇದರ ಬಗ್ಗೆ ಪ್ರಜೀಸರ್ ಲಾಪ್ ಆಗಿರುವ ಬಗ್ಗೆ ಅನುಮಾನ ಮೂಡುತ್ತದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ಸಂಬಂಧಪಟ್ಟ ಆರ್.ಎಫ್.ಓ ಹಾಗೂ ಡಿ.ಎಫ್. ಓ, ಪಶುವೈದ್ಯಾಧಿಕಾರಿಗಳ ಮೇಲೆ ಸೂಕ್ತ ಕ್ರಮ ವಹಿಸಲು ಕೋರುತ್ತೇವೆ.

7. ಫಾರೆಸ್ಟ್ ಇನ್ ಚಾರ್ಜ್ ಆಫ್ ಎಅಫೆಂಟ್ ಜಮೇದಾರ್‌ನಾಗಿ ಕೆಲಸ ನಿರ್ವಹಿಸುತ್ತಿರುವವರ ಅಡಿಯಲ್ಲಿ ಬರುವ ಮಾವುತ ಹಾಗೂ ಕೊಥಾಲರಿಂದ ಕಾಲಕಾಲಕ್ಕೆ ಎಲ್ಲಾ ಆನೆಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಸಂಗ್ರಹಿಸಿ, ಆರ್.ಎಫ್.ಓ ಮತ್ತು ವೈದ್ಯಾಧಿಕಾರಿಯವರಿಗೆ ತಿಳಿಸಬೇಕಾಗಿದ್ದು, ಈ ಪ್ರಕರಣದಲ್ಲಿ ಇವರೆಲ್ಲರ ಮಧ್ಯೆ ಸಮನ್ವಯ ಕೊರತೆ ಕಾರಣದಿಂದ ಈ ಒಂದು ಘಟನೆ ನಡೆದಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ತುಂಬ ಗರ್ಭಿಣಿಯಾದ ಆನೆಯನ್ನು ತಾಲೀಮಿನ ಹೆಸರಿನಲ್ಲಿ ಬಿಸಿಯಾದ ಕಾದಿರುವ ಡಾಂಬರ್ ರಸ್ತೆಯ ಮೇಲೆ ಕಿಲೋ ಮೀಟರ್ ಗಟ್ಟಲೆ ನಡೆಸಿರುತ್ತಾರೆ. ಹಾಗೂ ಪಟಾಕಿ ಶಬ್ದವನ್ನು ಮಾಡಿರುತ್ತಾರೆ. ಲಾರಿಯಲ್ಲಿ ಬಲವಂತವಾಗಿ ತೆಗೆದುಕೊಂಡು ಬಂದಿರುವುದು ಮತ್ತು ಕೆರೆದುಕೊಂಡು ಹೋಗಿರುವುದು ಅಮಾನೀಯವಾಗಿರುತ್ತದೆ. ಹಾಗಾಗಿ ಇವರುಗಳ ಮೇಲೆ ಕಾಲಮಿತಿಯೊಳಗೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ
ಮಲೆನಾಡು ಕೇಸರಿ ಪಡೆಯ ಅಧ್ಯಕ್ಷರಾದ ಚಂದ್ರಶೇಖರ ( ಕೋಟೆರಾಜು) ಹಾಗೂ ಸದಸ್ಯರುಗಳು ಆಗ್ರಹಿಸಿದ್ದಾರೆ.

Related Articles

Stay Connected

0FansLike
3,912FollowersFollow
0SubscribersSubscribe

Latest Articles