ಅಮ್ರುತ ದಂತ ಹಾಲು ಕೊಡುವ ಗೋವಿನ ಕತ್ತನ್ನು ಕಡಿದರೆ ಯಾವುದೇ ಅಪರಾಧವಲ್ಲ.ಅಬ್ಬಬ್ಬಾ ಎಂತಾ ಅವಸ್ಥೆ.. ಛೇ? 

0
112

ಇದೆಂಥ ವಿಚಿತ್ರ ಕಾನೂನು ಹುಲಿಯ ಉಗುರು ಕಿತ್ತರೆ ಅದು ಮಹಾನ್ ಅಪರಾಧ ವಂತೆ ಜೊತೆಗೆ 14 ವರ್ಷ ಜೈಲು ಶಿಕ್ಷೆ.

  1. ಆದರೆ ಅದೇ ಶುದ್ಧವಾದ ಅಮ್ರುತ ದಂತ ಹಾಲು ಕೊಡುವ ಗೋವಿನ ಕತ್ತನ್ನು ಕಡಿದರೆ ಯಾವುದೇ ಅಪರಾಧವಲ್ಲ..*ಅಬ್ಬಬ್ಬಾ ಎಂತಾ ಅವಸ್ಥೆ.. ಛೇ 

ರೈತರ ಬೆನ್ನೆಲುಬು ಗೋವು, ದೇವರ ಅಭಿಷೇಕಕ್ಕೂ ಪವಿತ್ರವಾದ ಹಾಲು ಹಸುವಿನ ಹಾಲು ಬೇಕು, ಯಾವುದೇ ಧರ್ಮ, ಯಾವುದೇ ಜಾತಿ ಎನ್ನದೆ ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧ ಮನುಷ್ಯನಿಗೂ ಹಸುವಿನ ಹಾಲು ಬೇಕು.

ಅದರ ಗಂಜಲ ಸಗಣಿ ಎಲ್ಲವೂ ಪರಮ ಪವಿತ್ರ,ಶ್ರೇಷ್ಠ.. ಅದಕ್ಕಾಗಿಯೇ ಗೋವನ್ನು ಭಕ್ತಿಯಿಂದ ಗೋಮಾತೆ ಎಂದು ಪೂಜಿಸುತ್ತಾರೆ.

ಆದರೆ ಹುಲಿಯ ಉಗುರಿಗೆ ಇಷ್ಟೊಂದು ಬೆಲೆನ, ಗೌರವನ, ಇಷ್ಟೊಂದು ಕಟ್ಟರ್ ಕಾನೂನು.

ಆದರೆ ನಮ್ಮೆಲ್ಲರನ್ನೂ ಪೋಷಿಸುವ ಆ ಪವಿತ್ರವಾದ ಗೋಮಾತೆಯನ್ನು ಪ್ರತಿ ನಿತ್ಯ ಸಾವಿರಾರು ಕಸಾಯೀ ಖಾನೆಗಳಲ್ಲಿ ಲಕ್ಷಾಂತರ ಗೋವುಗಳನ್ನು ಚಿತ್ರ ವಿಚಿತ್ರವಾಗಿ ಹಿಂಸಿಸಿ ಕ್ರೂರವಾಗಿ ಕೊಲ್ಲುವವರಿಗೆ ಯಾವುದೇ ಕಠಿಣವಾದ ಕಾನೂನು ಶಿಕ್ಷೆ ಇಲ್ಲವೇ.

  1. ಈ ಎಲ್ಲಾ ಕಸಾಯಿಖಾನೆ ಗಳನ್ನು ಮುಚ್ಚಿಸಲೇ ಬೇಕು ಗೋಹತ್ಯೆ ನಿಷೇಧ ಕಾಯ್ದೆಯಡಿ ಯಲ್ಲಿ ಗೋಹತ್ಯೆ ಮಾಡುತ್ತಿರುವವರನ್ನು ಕೂಡಲೇ ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದು ಸರ್ಕಾರಕ್ಕೆ ಆಗ್ರಹ ಪಡಿಸುವೆನು.

ಹೆಚ್.ಕೆ.ದೀನದಯಾಳು.

ಹಿಂದೂ ಮುಖಂಡರು. ಶಿವಮೊಗ್ಗ