Wednesday, September 25, 2024
spot_img

ಲೆಫ್ಟಿನೆಂಟ್ ಜನರಲ್ ಶರಣ ಬಿ.ಎಸ್. ರಾಜು ಜನರಲ್ ಆಫೀಸರ್, ಕಮ್ಯಾಂಡಿಂಗ್ ಇನ್ ಚೀಫ್, ರವರನ್ನು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಳ್ಳಲಾಯಿತು

ಲೆಫ್ಟಿನೆಂಟ್ ಜನರಲ್ ಶರಣ ಬಿ.ಎಸ್. ರಾಜು ಜನರಲ್ ಆಫೀಸರ್, ಕಮ್ಯಾಂಡಿಂಗ್ ಇನ್ ಚೀಫ್,
ಇವರನ್ನು ಇಂದು ಶಿವಮೊಗ್ಗದ ವಿಮಾನ ನಿಲ್ದಾಣದಲ್ಲಿ
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಸ್ವಾಗತಕೋರುತ ಬರಮಾಡಿಕೊಳ್ಳಲಾಯಿತು ಈ ಸಮಯದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷರಾದ ರುದ್ರಮುನಿ ಸಜ್ಜನ್, ಮಹೇಶ್ ಮೂರ್ತಿ,
ಮೃತ್ಯುಂಜಯ ಮಲ್ಲಿಕಾರ್ಜುನ ಖಾನೂರ್, ಧ್ರುವ, ಚನ್ನಬಸಪ್ಪ, ಶಿವಯೋಗಿ ಹಂಚಿನ ಮನೆ, ಚಂದ್ರಶೇಖರ್ ತಳಿ ಹಾಳ್, ಸುವಾಸ್, ಮೋಹನ್, ಶಶಿಧರ್, ಆನಂದಮೂರ್ತಿ, ಇದ್ದರು

ಪರಿಚಯ
ಲೆಫ್ಟಿನೆಂಟ್ ಜನರಲ್ ಶರಣ ಬಿ.ಎಸ್. ರಾಜು ಜನರಲ್ ಆಫೀಸರ್, ಕಮ್ಯಾಂಡಿಂಗ್ ಇನ್ ಚೀಫ್, ಭಾರತೀಯ ಸೇನೆ ಡಿಸೆಂಬರ್ 15, 1984ರಲ್ಲಿ ಭಾರತೀಯ ಸೈನ್ಯದ ಜಾಟ್ ರೆಜಿಮೆಂಟ್‌ನಲ್ಲಿ ವೃತ್ತಿ ಜೀವನ ಆರಂಭಿಸಿದ ಲೆಫ್ಟಿನೆಂಟ್ ಜನರಲ್ ಬಿ.ಎಸ್. ರಾಜು, ಪ್ರಸ್ತುತ ಭವ್ಯ ಭಾರತದ ಹೆಮ್ಮೆಯ ಸೈನ್ಯದ ನೈರುತ್ಯ ವಿಭಾಗದ ಕಮ್ಯಾಂಡಿಂಗ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೇಂದ್ರ ರಕ್ಷಣಾ ಸಚಿವಾಲಯದಲ್ಲಿ ಅತ್ಯುನ್ನತ ಅಧಿಕಾರಿಯಾಗಿ, ಸೇನಾ ಸಿಬ್ಬಂದಿಯ ಉಪಮುಖ್ಯಸ್ಥರಾಗಿ ಸೇವೆ ಸಲ್ಲಿಸಿ “ಪರಮ್ ವಿಶಿಷ್ಟ ಸೇವಾ ಪದಕವನ್ನು ಮತ್ತು 39 ವರ್ಷಗಳ ಸುದೀರ್ಘ ಸೇವಾವಧಿಯಲ್ಲಿ ವಿವಿಧ ಪ್ರಶಂಸಾ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಕಾಶ್ಮೀರ ಗಡಿಭಾಗದ ಅತ್ಯಂತ ಕಠಿಣಾತಿ ಕಠಿಣ ಪ್ರದೇಶಗಳಲ್ಲಿ ಉಗ್ರರನ್ನು ಸದೆಬಡಿದು ಶಾಂತಿ ನೆಲೆಸುವಲ್ಲಿ, ಸೇನೆಯ ಹಲವು ಕ್ಲಿಷ್ಟ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿ ಭಾರತಮಾತೆಯ ಸುರಕ್ಷೆಗಾಗಿ ಅಪರಿಮಿತ ಶ್ರಮವಹಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರದಲ್ಲಿ ಜನ್ಮ ತಳೆದ ಧೀಮಂತ-ಧೀರೋದಾತ್ತ ಲೆಫ್ಟಿನೆಂಟ್ ಜನರಲ್ ಶರಣ ಬಿ.ಎಸ್. ರಾಜು ಅವರಿಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ 2022-23ನೇ ಸಾಲಿನ “ಕೆಳದಿ ಶಿವಪ್ಪ ನಾಯಕ ಪ್ರಶಸ್ತಿ”ಯನ್ನು ನೀಡಿ ಗೌರವಿಸಲಾಗುತ್ತಿದೆ. 08-10-2023 ಭಾನುವಾರ
ಸ್ಥಳ: ಕುವೆಂಪು ರಂಗಮಂದಿರ ಶಿವಮೊಗ್ಗ ವೀರಶೈವ ಸಮಾಜ ಬಾಂಧವರು ಹಾಗೂ ಸಾರ್ವಜನಿಕರಿಗೂ ಆದರದ ಸುಸ್ವಾಗತ ಬನ್ನಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ.

Related Articles

Stay Connected

0FansLike
3,912FollowersFollow
0SubscribersSubscribe

Latest Articles