Wednesday, September 25, 2024
spot_img

ಮೆಗ್ಗಾನ್ ಶ್ರೀ ಆರೋಗ್ಯ ಗಣಪತಿ ಉತ್ಸವ

ಮೆಗ್ಗಾನ್ ಶ್ರೀ ಆರೋಗ್ಯ ಗಣಪತಿ ಉತ್ಸವ ನಿಮಿತ್ತ ರಕ್ತದಾನ ಮಾಡಿದ ನರ್ಸಿಂಗ್ ಆಫೀಸರ್ ಮತ್ತು
ವೈದ್ಯಕೀಯ ಸಿಬ್ಬಂದಿಗಳು
ಶಿವಮೊಗ್ಗ: ಮೆಗ್ಗಾನ್ ನರ್ಸ್ ಕ್ವಾಟ್ರರ್ಸ್ನಲ್ಲಿ ಈ ಬಾರಿ ವಿಶಿಷ್ಟವಾಗಿ ಗಣೇಶೋತ್ಸವ ಆಚರಿಸಲಾಗುತ್ತಿದ್ದು, ಮೆಗ್ಗಾನ್ ಶ್ರೀ ಆರೋಗ್ಯ ಗಣಪತಿ ಪ್ರತಿಷ್ಠಾಪಿಸಲಾಗಿದೆ.
ಕಳೆದ ಹತ್ತು ವರ್ಷಗಳಿಂದ ಇಲ್ಲಿ ಗಣಪತಿ ಪ್ರತಿಷ್ಠಾಪಿಸಲಾಗುತ್ತಿದೆ. ಪ್ರತಿ ವರ್ಷ ಕೇವಲ ಅನ್ನ ಸಂತರ್ಪಣೆ ಮಾಡಲಾಗುತ್ತಿತ್ತು. ಮೂರು ವರ್ಷಗಳಿಂದ ಕ್ವಾಟ್ರರ್ಸ್ನ ಮಹಿಳೆಯರು, ಮಕ್ಕಳಿಗೆ ವಿಶೇಷ ಕ್ರೀಡಾಕೂಟ, ಪ್ರತಿಭಾವಂತ ಮಕ್ಕಳಿಗೆ ಸನ್ಮಾನ ಮಾಡಲಾಗುತ್ತಿದೆ.

ಆದರೆ, ಈ ಬಾರಿ ಕ್ವಾಟ್ರಸ್‌ನ ನರ್ಸಿಂಗ್ ಆಫೀಸರ್ಸ್ ಹಾಗೂ ವೈದ್ಯಕೀಯ ಸಿಬ್ಬಂದಿಗಳು ಮತ್ತು ಮೆಗ್ಗಾನ್ ಆಸ್ಪತ್ರೆಯ ಸಿಬ್ಬಂದಿಗಳು ರಕ್ತದಾನ ಮಾಡುವ ಮೂಲಕ ವೈಶಿಷ್ಟ್ಯವನ್ನು ಮೆರೆದಿದ್ದು, ಗಣೇಶೋತ್ಸವದಲ್ಲಿ ನಿಜವಾದ ಆರೋಗ್ಯೋತ್ಸವ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮೆಗ್ಗಾನ್‌ನ ವೈದ್ಯಕೀಯ ಅಧೀಕ್ಷ ಡಾ. ಟಿ.ಡಿ. ತಿಪ್ಪಮ್ಮ, ಗಣೇಶೋತ್ಸವ ಎಂದರೆ ಕೇವಲ ಹಾಡು, ಕುಣಿತ ಎಂಬ ಭಾವನೆ ಇದೆ. ಆದರೆ, ಇಂದು ನಮ್ಮ ಸಿಬ್ಬಂದಿಗಳು ರಕ್ತದಾನ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಆ ಮೂಲಕ ಮಾನವೀಯತೆ ಮೆರೆದಿದ್ದಾರೆ ಎಂದರು.

 

ಸಿಮ್ಸ್ನ ನಿರ್ದೇಶಕ ವಿರೂಪಾಕ್ಷಪ್ಪ ಅವರ ಮಾರ್ಗದರ್ಶನದಲ್ಲಿ ನಡೆದ ರಕ್ತದಾನ ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಜನ್ ಡಾ. ಸಿದ್ದನಗೌಡ ಪಾಟೀಲ್, ಶುಶ್ರೂಷಕ ಅಧೀಕ್ಷಕಿ ಅನ್ನಪೂರ್ಣ ಹೆಚ್.ಟಿ. ವಿನಯ್ ಇನ್ನು ಮುಂತಾದವರು ಉಪಸ್ಥಿತರಿದ್ದರು.
ನರ್ಸಿಂಗ್ ಆಫೀಸರ್ಸ್ ಗಳಾದ ಎಂ.ಆರ್. ಸಂತೋಷ್, ದಕ್ಷಣಿಮೂರ್ತಿ, ಅಶೋಕ್, ಸಂತೋಷ, ಕುಮಾರ, ಹನುಮಂತಪ್ಪ, ಗೀತೇಶ್, ಶ್ರೀನಿವಾಸನಾಯ್ಡು, ಜಯಂತ್, ರಘು, ಸೇರಿದಂತೆ ಹಲವರು ರಕ್ತದಾನ ಮಾಡಿದರು.
ಸೆ.24ರ ಭಾನುವಾರ ಗಣಹೋಮ, ಅನ್ನಸಂತರ್ಪಣೆಯ ನಂತರ ಸಂಜೆ 5.2೦ಕ್ಕೆ ರಾಜಬೀದಿ ಉತ್ಸವ ನಡೆಸಿ ಮೆಗ್ಗಾನ್ ಶ್ರೀ ಆರೋಗ್ಯ ಗಣಪತಿ ವಿಸರ್ಜನೆ ಮಾಡಲಾಗುವುದು. ಸಮಸ್ತ ಭಕ್ತಾದಿಗಳು ಪಾಲ್ಗೊಳ್ಳುವಂತೆ ಗಣೇಶೋತ್ಸವ ಸಮಿತಿ ಕೋರಿದೆ.

 

Related Articles

Stay Connected

0FansLike
3,912FollowersFollow
0SubscribersSubscribe

Latest Articles