ಶಿವಮೊಗ್ಗ ಸ್ಟಾರ್ಸ್ ನ ಜೆಸಿಐ ಸಪ್ತಾಹ

0
133

ಯಶಸ್ವಿಯಾಗಿ ಮುಕ್ತಾಯಗೊಂಡ ಜೆಸಿಐ ಶಿವಮೊಗ್ಗ ಸ್ಟಾರ್ಸ್ ನ ಜೆಸಿಐ ಸಪ್ತಾಹ

ಮಹಿಳೆಯರಿಗೆ ಆರೋಗ್ಯ ಶಿಬಿರ, ಸರ್ಕಾರಿ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ , ಶಾಲಾ ಮಕ್ಕಳಿಗೆ ತಂಬಾಕು ಮತ್ತು ಮಾಧಕ ವಸ್ತು ಸೇವನೆ ಬಗ್ಗೆ ಮಾಹಿತಿ ಜಾಗೃತಿ ಕಾರ್ಯಕ್ರಮ, ರಸ್ತೆ ಬದಿಯಲ್ಲಿ ದೇವಸ್ಥಾನಗಳ ಸುತ್ತ ಗಿಡ ನೆಡುವ ಕಾರ್ಯಕ್ರಮ. ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ಬಗ್ಗೆ, ಪರಿಸರದ ಬಗ್ಗೆ ಸ್ವಚ್ಛತೆಯ ಬಗ್ಗೆ ಜಾಗೃತಿ ಕಾರ್ಯಕ್ರಮ, ನಿರಾಶ್ರಿತರಿಗೆ ಅವಶ್ಯಕತೆ ಇರುವವರಿಗೆ ಆಹಾರ ವಿತರಣೆ. B2B ವ್ಯಾಪಾರದ ಬಗ್ಗೆ ಜೆಸಿ ಸದಸ್ಯರ ಮಲ್ಟಿ ಲೊಮ್ ಸಭೆ ಕರೆದು ತಮ್ಮ ತಮ್ಮ ವ್ಯಾಪಾರದ ಬಗ್ಗೆ ಪ್ರಚಾರ ಮಾಡಲಾಯಿತು. ಜೆಸಿಐ ಕಾರ್ಯಕ್ರಮಗಳಿಗೆ ಸಹಕಾರ ನೀಡಿದ ಜೆಸಿಐ ಕುಟುಂಬಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು. ಕೊನೆಯ ದಿನ ವಿವಿದ ಸಾಧನೆಗಳನ್ನು ಮಾಡಿದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.

ಮೊದಲ ದಿನದಿಂದ ಕೊನೆಯ ದಿನದವರೆಗೂ ಕ್ರಿಯಾತ್ಮಕವಾಗಿ, ವಿಶೇಷವಾಗಿ ಕಾರ್ಯಕ್ರಮಗಳು ನಡೆದವು, ಸದಸ್ಯರು ಪದಾಧಿಕಾರಿಗಳು ಹೆಚ್ಚಿನ ಸಹಕಾರ, ಸಲಹೆಗಳನ್ನು ನೀಡಿದರು. ಹಿರಿಯ ಜೆಸಿ ಗಳು ಒಳ್ಳೆಯ ಮಾರ್ಗದರ್ಶನ ನೀಡಿದರು ಎಂದು ಸಂಸ್ಥೆಯ ಅಧ್ಯಕ್ಷರಾದ ಜೆಸಿ ಅಶ್ವಿನಿ ಚಂದ್ರಶೇಖರ್ ಮಾಹಿತಿ ನೀಡಿ , ಎಲ್ಲಾ ಪದಾಧಿಕಾರಿ ಮತ್ತು ಸದಸ್ಯರಿಗೂ ಹಾಗೂ ಮಾಧ್ಯಮ ಮಿತ್ರರಿಗೆ ಧನ್ಯವಾದ ತಿಳಿಸಿದ್ದಾರೆ.
ಸಪ್ತಾಹದ ಕೊನೆಯ ದಿನ ವಿನೋಭನಗರದ ವಿಧಾತ್ರಿ ಹೋಟೆಲ್ ನ ಸಭಾಂಗಣದಲ್ಲಿ ಜರುಗಿತ್ತು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಜೆಸಿ ಅಶ್ವಿನಿ ಚಂದ್ರಶೇಖರ್ ಜೆಸಿಐ ಶಿವಮೊಗ್ಗ ಸ್ಟಾರ್ಸ್, ಮುಖ್ಯ ಅತಿಥಗಳಾಗಿ ವಸಂತ್ ಹೋಬಳಿದರ್ ಕಾರ್ಯದರ್ಶಿಗಳು ಚೇಂಬರ್ ಆಫ್ ಕಾಮರ್ಸ್, ಉದ್ಘಾಟಕರಾಗಿ ಜೆಸಿ ಅನುಶ್ ಗೌಡ ವಲಯ 24ರ ಅಧ್ಯಕ್ಷ, ಗೌರವ ಅತಿಥಗಳಾಗಿ ಜೆಸಿ ಸತೀಶ್ ಚಂದ್ರ ರೋಟರಿ ಪೂರ್ವ ಅಧ್ಯಕ್ಷರು ಹಾಗೂ ಡಾಕ್ಟರ್ ಗಿರೀಶ್, ಆರಾಧನಾ ಆರ್ಥೋ ಅಸ್ಪತ್ರೆಯ, ಅತಿಥಿಗಳಾಗಿ ಜೆಸಿ ಪ್ರಮೋದ್ ಶಾಸ್ತ್ರಿ, ಜೆಸಿ ಗೌರೀಶ್ ಭಾರ್ಗವ, ಜೆಸಿ ಪ್ರದೀಪ್, ಜೆಸಿ ಪ್ರಿಯಾಂಕ ಗೌಡ ಕಾರ್ಯದರ್ಶಿ , ಜೆಸಿ ನವೀನ್ ತಲಾರಿ ಕಾರ್ಯಕ್ರಮದ ನಿರ್ದೇಶಕರು, ನಿರೂಪಣೆ ಜೆಸಿ ಕಿಶನ್, ಪ್ರಾರ್ತನೆ ಜೆಸಿ ವಿದ್ಯಾಶ್ರೀ