Wednesday, September 25, 2024
spot_img

76ನೇ ವಾರ್ಷಿಕೋತ್ಸವದ ಅಮೃತ ಮಹೋತ್ಸವ ವರ್ಷ

ಇಂದಿನ ಪತ್ರಿಕಾಗೋಷ್ಠಿಯಲ್ಲಿ ಶಂಕರ್ ನಾರಾಯಣ ಶಾಸ್ತ್ರಿ ಅವರು ಮಾತನಾಡುತ್ತಾ ಶಿವಮೊಗ್ಗ ನಗರದ ಪ್ರತಿಷ್ಠಿತ ಶ್ರೀ ವಿದ್ಯಾಗಣಪತಿ ಸೇವಾ ಸಂಘ 76ನೇ ವರ್ಷದ ಆಚರಣೆ ಸಂಭ್ರಮದಲ್ಲಿದೆ. 1948 ರಲ್ಲಿ 04 ಹುಡುಗರಿಂದ ಆರಂಭವಾದ ಈ ಸಂಸ್ಥೆ 76 ವರ್ಷಗಳ ಕಾಲ ಶಿವಮೊಗ್ಗ ನಗರದಲ್ಲಿ ಸಾರ್ವಜನಿಕ ಗಣಪತಿಯನ್ನು ಪ್ರತಿಷ್ಠಾಪಿಸಿ, ನಿರಂತರವಾಗಿ ವೇದಿಕೆಯಾಗಿದೆ.

ಶಾಸ್ತ್ರೀಯ ಸಂಗೀತ

 

ಭಾರತೀಯ ಶಾಸ್ತ್ರೀಯ ಸಂಗೀತದ ಕಾರ್ಯಕ್ರಮಗಳಿಗೆ ಭಾರತದ ದಿಗ್ಗಜ ಸಂಗೀತ ಕಲಾವಿದರು ವಿದ್ಯಾಗಣಪತಿ ಸೇವಾ ಸಂಘದ ವೇದಿಕೆಯಲ್ಲಿ ಕಾರ್ಯಕ್ರಮ ನೀಡಿರುತ್ತಾರೆ. ಕಾರ್ಯಕ್ರಮಗಳಿಗೆ ಮೀಸಲಾದ ಈ ಸಂಸ್ಥೆ ರಾಷ್ಟ್ರದಾದ್ಯಂತ ಸಾಂಸ್ಕೃತಿಕ ವಲಯದಲ್ಲಿ ಹೆಸರು ಮಾಡಿದೆ. ಹಿಂದೆ ಈ ಸಂಸ್ಥೆಯ ಸುವರ್ಣ ಮಹೋತ್ಸವದ (50 ವರ್ಷ) ಸಂದರ್ಭದಲ್ಲಿ 50 ಶಾಸ್ತ್ರೀಯ ಸಂಗೀತಗಳ ಕಾರ್ಯಕ್ರಮ ಏರ್ಪಡಿಸಿದ್ದನ್ನೂ ಹಾಗೂ 60 ವರ್ಷ ತುಂಬಿದ
ಸಂದರ್ಭದಲ್ಲಿ 60 ಶಾಸ್ತ್ರೀಯ ಸಂಗೀತದ ಕಾರ್ಯಕ್ರಮ
ಈ ವರ್ಷ 76ನೇ ಅಮೃತ ಮಹೋತ್ಸವ ಅಂಗವಾಗಿ
75 ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ವಿಶೇಷವಾಗಿರುತ್ತದೆ ಇದರ ಅಂಗವಾಗಿ ಖ್ಯಾತ ಪಿಟೀಲು ವಾದಕ ದೇಶ ವಿದೇಶಗಳಲ್ಲಿ ಪ್ರಖ್ಯಾತಿಯನ್ನು ಹೊಂದಿರುವ, ಡಾಕ್ಟರ್ ಅಬ್ದುಲ್ ಕಲಾಂ ರವರಿಂದ ಪ್ರಶಸ್ತಿಯನ್ನು ಸ್ವೀಕರಿಸಿರುವ ರಾಕೇಶ್ ಶುಕ್ಲ ರವರು,
ಹಾಗೂ ಹೆಸರಾಂತ ತಬಲವಾದಕ ಸತ್ಯಜಿತ್ ತಾವಲ್ಕರ್
ಈ ದಿಗ್ಗಜರ ಕಾರ್ಯಕ್ರಮವನ್ನು ದಿನಾಂಕ 19-09-2023 ಮಂಗಳವಾರ ಸಂಜೆ 06-30 ಕ್ಕೆ ಕೋಟೆ ಮಾರಿಕಾಂಬ ಸಭಾಭವನದಲ್ಲಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ನಗರದ ಜನರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಶ್ರೀ ವಿದ್ಯಾ ಗಣಪತಿ ಸೇವಾ ಸಂಘ ಮನವಿ ಮಾಡುತ್ತದೆ ಎಂದರು

ಪತ್ರಿಕಾಗೋಷ್ಠಿಯಲ್ಲಿ
ಅಧ್ಯಕ್ಷರಾದ ಶಂಕರ್ ನಾರಾಯಣ್ ಶಾಸ್ತ್ರಿ
ಉಪಾಧ್ಯಕ್ಷರಾದ ಶ್ರೀಕಂಠ ಜೋಯಿಸ್
ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶಾಸ್ತ್ರಿ
ಸಹ ಕಾರ್ಯದರ್ಶಿಯಾದ ಆನಂದ್
ಖಜಾಂಚಿಯಾದ ಮೋಹನ್ ಶಾಸ್ತ್ರಿ ಮುಂತಾದವರು ಪಾಲ್ಗೊಂಡಿದ್ದರು.

Related Articles

Stay Connected

0FansLike
3,912FollowersFollow
0SubscribersSubscribe

Latest Articles