ಸೆ.15 ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ಉದ್ಯೋಗ ಮೇಳ

0
111

Sathvikanudi.com

September 11, 2023
ಕೆಲಸ ಹುಡುಕ್ತಿರೋರಿಗೆ ಗುಡ್ ನ್ಯೂಸ್, ಶಿವಮೊಗ್ಗ ಸೈನ್ಸ್ ಮೈದಾನದಲ್ಲಿ ಬೃಹತ್ ಉದ್ಯೋಗ ಮೇಳ, 5 ಸಾವಿರ ಕೆಲಸ SEPTEMBER 2023

SHIMOGA : ಸೈನ್ಸ್ ಮೈದಾನದಲ್ಲಿ ರಾಜ್ಯ ಮಟ್ಟದ ಬೃಹತ್ ಉದ್ಯೋಗ ಮೇಳ (UDYOGA MELA) ಆಯೋಜಿಸಲಾಗಿದೆ. ಸುಮಾರು ಐದು ಸಾವಿರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ತಿಳಿಸಿದರು‌,
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಸೆಲ್ವಮಣಿ, ಸೆ.15ರಂದು ನಡೆಯುವ ಉದ್ಯೋಗ ಮೇಳದಲ್ಲಿ ಯಾವುದೆ ವಿದ್ಯಾರ್ಹತೆ ಹೊಂದಿರುವ ಉದ್ಯೋಗ ಆಕಾಂಕ್ಷಿಗಳು ಭಾಗವಹಿಸಬಹುದು ಎಂದು ತಿಳಿಸಿದರು‌.

ಯಾವೆಲ್ಲ ಖಾಸಗಿ ಕಂಪನಿ ಬರಲಿವೆ?
ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ನಿರ್ದೇಶಕ ಡಾ. ನಾಗೇಂದ್ರ ಎಫ್.ಹೊನ್ನಳ್ಳಿ ಮಾತನಾಡಿ, ಮೈಕ್ರೋಸಾಫ್ಟ್, ಬಾಷ್, ಟೊಯೋಟಾ ಸಂಸ್ಥೆ ಸೇರಿದಂತೆ ವಿವಿಧ ಕ್ಷೇತ್ರದ ಸುಮಾರು 40-50 ಉದ್ಯಮಗಳು ಉದ್ಯೋಗ ಮೇಳದಲ್ಲಿ (UDYOGA MELA) ಭಾಗವಹಿಸಲಿವೆ. ಪ್ರತಿ ಕಂಪನಿಗೆ ಒಂದೊಂದು ಕೊಠಡಿ ಮೀಸಲಿಡಲಾಗಿದೆ. ಆಕಾಂಕ್ಷಿಗಳು ತಮ್ಮ ವಿದ್ಯಾರ್ಹತೆ ಅನುಗುಣವಾಗಿ ಸಂದರ್ಶನದಲ್ಲಿ ಭಾಗವಹಿಸಬಹುದು. ನೇರ ಸಂದರ್ಶನ, ಪರೀಕ್ಷೆಗಳು ಕೂಡ ನಡೆಯಲಿವೆ.

ಮೇಳದಲ್ಲಿ ಐಟಿಐ ತರಬೇತುದಾರರಿಗೆ ಅವಕಾಶ ಕಲ್ಪಿಸಲಾಗಿದೆ. ಎಸ್ ಎಸ್ ಎಲ್ ಸಿ ಪಾಸು ಫೇಲು ಮತ್ತು ದ್ವಿತೀಯ ಪಿಯುಸಿ ಮತ್ತು ಇತರೆ ಪದವೀಧರರಿಗೂ ಅವಕಾಶ ಕಲ್ಪಿಸಲಾಗಿದೆ. ಉದ್ಯೋಗ ಕಲ್ಪಿಸಿದವರಿಗೆ ಜಿಲ್ಲಾಡಳಿತವೇ ತರಬೇತು ನೀಡಲಿದೆ. 3000 ಉದ್ಯೋಗಾಕಾಂಕ್ಷಿಗಳು ಈ ಉದ್ಯೋಗ ಮೇಳದ ಲಾಭಪಡೆಯಲಿದ್ದಾರೆ ಎಂಬ ನಿರೀಕ್ಷೆ ಇದೆ ಎಂದರು.

ಸ್ಥಳೀಯ ಉದ್ಯಮಗಳಿಗೆ ಅವಕಾಶ
ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಸ್ಥಳೀಯ ಉದ್ಯಮ, ಕೈಗಾರಿಕೆಗಳು ಕೂಡ ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ‌. ಆಸಕ್ತರು 8757825088, 9880005425, 08182-255293, 08182-255294 ಸಂಪರ್ಕಿಸಬಹುದು. ಅಲ್ಲದೆ ಸೆ.15ರಂದು ನೇರವಾಗಿ ಬಂದು ಹೆಸರು ನೋಂದಾಯಿಸಬಹುದಾಗಿದೆ ಎಂದು ನಾಗೇಂದ್ರ ಎಫ್.ಹೊನ್ನಳ್ಳಿ ತಿಳಿಸಿದರು.

ಕೌಶಲ್ಯ ಅಭಿವೃದ್ಧಿಗೆ ಅವಕಾಶ
ಉದ್ಯೋಗ ಮೇಳದಲ್ಲಿ ಭಾಗವಹಿಸಿ ಉದ್ಯೋಗ ಲಭಿಸದೆ ಇದ್ದರೆ ಅಂತವರ ಡೇಟಾ ಬೇಸ್ ಪಡೆಯಲಾಗುತ್ತದೆ. ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಿಂದ ಅಂತಹ ಅಭ್ಯರ್ಥಿಗಳ ಕೌಶಲ್ಯ ಅಭಿವೃದ್ಧಿಗೆ ವ್ಯವಸ್ಥೆ ಮಾಡಲಾಗುತ್ತದೆ. ಇನ್ನು, ಈ ಬಾರಿ ಉದ್ಯೋಗ ಮೇಳದಲ್ಲಿ ವಿವಿಧ ಕಂಪನಿಗಳ ಸ್ಟಾಲ್ ಸ್ಥಾಪಿಸಲಾಗುತ್ತಿದೆ. ಮೇಳಕ್ಕೆ ಬಂದವರು ಸ್ಟಾಲ್‌ಗಳಿಗೆ ಭೇಟಿ ನೀಡಿ, ಆಯಾ ಉದ್ಯೋಗಕ್ಕೆ ಸಂಬಂಧಿಸಿದ ಕೌಶಲ್ಯದ ಕುರಿತು ಮಾಹಿತಿ ಪಡೆಯಬಹುದು ಎಂದು ನಾಗೇಂದ್ರ ಎಫ್.ಹೊನ್ನಳ್ಳಿ ತಿಳಿಸಿದರು.