ಹುಣಸೊಡಿನಲ್ಲಿ ಸಾಕು ಕೋಳಿಯ ಮೇಲೆ ನಾಯಿಗಳ ದಾಳಿ

0
36

ಶಿವಮೊಗ್ಗದ ಹುಣಸೋಡು ಗ್ರಾಮದ ನಿಂಗಮ್ಮ ಕೋಂ ಲೇಟ್ ತಿರುಮಲಯ್ಯ ಇವರು ತಮ್ಮ ಜೀವನ ನಿರ್ವಣೆಗಾಗಿ ಸಾಲ ಮಾಡಿ 30 ನಾಟಿ ಕೋಳಿಗಳನ್ನು
ತಮ್ಮ ಹಿತ್ತಲಿನಲ್ಲೇ ತೆಂಗಿನ ರಟ್ಟೆ ಹಾಗೂ ಗ್ರೀನ್ ನೆಟ್ ಅಳವಡಿಸಿ ಸಾಕುತ್ತಿದ್ದರು, ಇಂದು ಮಧ್ಯಾಹ್ನ ಕೆಲಸದ ಸಲುವಾಗಿ ಹೊರ ಹೋಗಿ ಬರುವಷ್ಟರಲ್ಲಿ ಊರಿನ ಕೆಲವು ನಾಯಿಗಳು ಪಕ್ಕದ ಕಾಂಪೌಂಡಿನಿಂದ ತೆಂಗಿನ ರಟ್ಟೆಯ ಮೇಲೆ ಜಿಗಿದು ಒಳ ಬಂದು 30 ಕೋಳಿಯ ಮೇಲೆ ದಾಳಿ ಮಾಡಿ ಗಾಯಗೊಳಿಸಿ 12 ಕೋಳಿಗಳನ್ನು ಸಾಯಿಸಿ ಅರ್ಧಬರ್ಧ ತಿಂದು ಬಿಟ್ಟಿರುತ್ತೇವೆ ಇದನ್ನು ಕಂಡ ಬಡ ತಾಯಿ ನಿಂಗಮ್ಮನವರು ದಿಕ್ಕೆ ತೋಚದಂತಾಗಿ ಕೊನೆಗೆ ಹುಣಸೋಡು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯತಿಯ ಅಧ್ಯಕ್ಷರಿಗೆ ದೂರನ್ನು ನೀಡುತ್ತಾರೆ
ಆದರೆ ಅವರು ಯಾವುದೇ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಹೇಳಿ ಕೈ ತೊಳೆದುಕೊಂಡಿದ್ದಾರೆ

ಆದರೆ ನಿಂಗಮ್ಮನವರ ನಾಟಿ ಕೋಳಿಯ ರಕ್ತದ ರುಚಿಯನ್ನು ನೋಡಿರುವ ನಾಯಿಗಳು ಮುಂದಿನ ದಿನದಲ್ಲಿ ಊರಿನ ಸಣ್ಣ ಮಕ್ಕಳು ಹಾಗೂ ಜನರ ಮೇಲೆ ದಾಳಿ ಮಾಡುವುದು ಖಚಿತ ವೆಂದಿದ್ದಾರೆ ಈಗಲಾದರೂ ಎಚ್ಚೆತ್ತುಕೊಂಡು ಗ್ರಾಮ ಪಂಚಾಯಿತಿ ಅಧಿಕಾರಿಗಳು
ದಾಳಿ ಮಾಡಿರುವ ನಾಯಿಯ ಮಾಲೀಕರಿಗೆ ತಿಳಿ ಹೇಳಿ ನಾಯಿಗಳಿಗೆ ಕಡಿವಾಣ ಹಾಕುತ್ತಾರೆಯೇ ಎಂಬುದು ಕಾದು ನೋಡಬೇಕಾಗಿದೆ.